ಬೆಂಗಳೂರು: ಕರ್ನಾಟಕ ವಿಡಿಯೊ ಮತ್ತು ಫೋಟೊ ಅಸೋಸಿಯೇಷನ್, ಬೈಸೇಲ್ ಇನ್‌ಟ್ರಾಕ್ಷನ್ ಪ್ರೈವೇಟ್ ಲಿಮಿಟೆಡ್ ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ಛಾಯಾಗ್ರಾಹಕರ ಸಹಯೋಗದಲ್ಲಿ ಜೂನ್ 27ರಿಂದ 29ರವರೆಗೆ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ‘ಫೋಟೊ ಟುಡೇ’ ವಸ್ತು ಪ್ರದರ್ಶನ ನಡೆಯಲಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಬೆಂಜಿಮಿನ್ ಭಾಸ್ಕರ್ ಮತ್ತು ಕಾರ್ಯದರ್ಶಿ ಜಗದೀಶ್ ಎಲ್., ‘ಛಾಯಾಗ್ರಾಹಕರಿಗೆ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವ ಉದ್ದೇಶದಿಂದ ಈ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ. 200ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ’ ಎಂದು ಮಾಹಿತಿ ನೀಡಿದರು.
‘ಜೂನ್ 27ರಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಅವರು ಮೇಳವನ್ನು ಉದ್ಘಾಟಿಸಲಿದ್ದು, ಶಾಸಕ ಪ್ರಸಾದ ಅಬ್ಬಯ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ’ ಎಂದರು.
ರಿಪಲ್ಸ್ ಆನ್ ಆರ್ಟ್ ಈವೆಂಟ್ ಜೂನ್ 28ಕ್ಕೆ
ಬೆಂಗಳೂರು: ಒರಾಯನ್ ಮಾಲ್ ಹಾಗೂ ಆರ್ಟ್ ಮ್ಯಾಟರ್ಸ್ ಸಹಯೋಗದಲ್ಲಿ ಜೂನ್ 28ರಂದು ಒರಾಯನ್ ಮಾಲ್‌ನಲ್ಲಿ ‘ರಿಪಲ್ಸ್ ಆನ್ ಆರ್ಟ್ ಈವೆಂಟ್ ಫಾರ್ ಸಸ್ಟೈನಬಲ್ ಬೆಂಗಳೂರು’ ಹಮ್ಮಿಕೊಳ್ಳಲಾಗಿದೆ.
‘ಹಾವುಗಳು ಮತ್ತು ಅವುಗಳ ಪರಿಸರ ವ್ಯವಸ್ಥೆ’ ಶೀರ್ಷಿಕೆ ಅಡಿ ನಡೆಯಲಿದೆ. ವೃತ್ತಿಪರ ಕಲಾವಿದರಿಗೆ ಲೈವ್ ಪೇಂಟಿಂಗ್ ಸ್ಪರ್ಧೆ, 5 ರಿಂದ 10 ವರ್ಷದೊಳಗಿನ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಪರಿಸರದ ಕುರಿತು ಗ್ರೀನ್ ಕ್ವಿಜ್ ಸ್ಪರ್ಧೆ, ಮಕ್ಕಳಿಗಾಗಿ ರ್‍ಯಾಪಿಡ್ ಆರ್ಟ್ ಸ್ಪರ್ಧೆ ಆಯೋಜಿಸಿದ್ದು. ಆಸಕ್ತರು ನೋಂದಣಿ ಮಾಡಿಕೊಳ್ಳಬಹುದು. ಮಾಹಿತಿಗೆ:99164 36399, 70195 76419.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.