ADVERTISEMENT

ಪಿ.ಎಂ.ವಿಶ್ವಕರ್ಮ ಯೋಜನೆ ನೋಂದಣಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2023, 15:52 IST
Last Updated 27 ಅಕ್ಟೋಬರ್ 2023, 15:52 IST
ಕೇಂದ್ರ ಸರ್ಕಾರದ ಪಿ.ಎಂ.ವಿಶ್ವಕರ್ಮ ಯೋಜನೆಗಳಿಗೆ ಹೆಸರು ನೋಂದಣಿ ಮಾಡಿಕೊಂಡವರಿಗೆ ಬಿಜೆಪಿ ಯುವ ಮುಖಂಡ ಅರುಣ್ ಸೋಮಣ್ಣ ನೋಂದಣಿ ಪತ್ರ ವಿತರಿಸಿದರು
ಕೇಂದ್ರ ಸರ್ಕಾರದ ಪಿ.ಎಂ.ವಿಶ್ವಕರ್ಮ ಯೋಜನೆಗಳಿಗೆ ಹೆಸರು ನೋಂದಣಿ ಮಾಡಿಕೊಂಡವರಿಗೆ ಬಿಜೆಪಿ ಯುವ ಮುಖಂಡ ಅರುಣ್ ಸೋಮಣ್ಣ ನೋಂದಣಿ ಪತ್ರ ವಿತರಿಸಿದರು   

ಬೆಂಗಳೂರು: ಕೇಂದ್ರ ಸರ್ಕಾರದ ಪಿ.ಎಂ.ವಿಶ್ವಕರ್ಮ ಯೋಜನೆಗಳಿಗೆ ಅರ್ಹ ಫಲಾನುಭವಿಗಳ ನೋಂದಣಿ ಕಾರ್ಯಕ್ಕೆ ಬಿಜೆಪಿ ಯುವ ಮುಖಂಡ ಅರುಣ್ ಸೋಮಣ್ಣ ಚಾಲನೆ ನೀಡಿದರು.

ಮಡಿವಾಳ, ಚಮ್ಮಾರ, ಕುಂಬಾರ, ನೇಕಾರರು, ಅಕ್ಕಸಾಲಿಗರು, ಗಾರೆ ಕೆಲಸದವರು, ಬಡಗಿ ಸೇರಿದಂತೆ ವಿವಿಧ ಕಾರ್ಮಿಕರನ್ನು ಪಿ.ಎಂ.ವಿಶ್ವಕರ್ಮ ಯೋಜನೆಯಡಿ ನೋಂದಣಿಗೆ ಅವಕಾಶ ನೀಡಲಾಗಿದೆ.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಗರಭಾವಿ ಮುಖ್ಯರಸ್ತೆಯಲ್ಲಿ ಪ್ರಗತಿ ಮಹಿಳಾ ಸಮಾಜ ಸೇವಾ ಸಂಘ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷ ವಿಶ್ವನಾಥ ಗೌಡ, ಪ್ರಗತಿ ಮಹಿಳಾ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ರತ್ನಂ ಇದ್ದರು. ಪಿ.ಎಂ.ವಿಶ್ವಕರ್ಮ ಯೋಜನೆಗೆ ಹೆಸರು ನೋಂದಾಯಿಸಿದವರಿಗೆ ನೋಂದಣಿ ಪತ್ರ ವಿತರಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.