ಬೆಂಗಳೂರು: ಶಂಕರಾಚಾರ್ಯರ ಮತ್ತು ರಾಮಾನುಜಾಚಾರ್ಯರ ಜಯಂತಿಯ ಅಂಗವಾಗಿ ಗಿರಿನಗರ ವಿಪ್ರ ಬಳಗವು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಂಕರಾಚಾರ್ಯ ಹಾಗೂ ರಾಮಾನುಜಾಚಾರ್ಯರ ಭಾವಚಿತ್ರಗಳನ್ನು ಅನಾವರಣ ಮಾಡಿತು.
ಇದೇ ವೇಳೆ ಸಿಹಿ ವಿತರಿಸುವ ಮೂಲಕ ಶಂಕರಾಚಾರ್ಯರ ಹಾಗೂ ರಾಮಾನುಜಾಚಾರ್ಯರ
ಜಯಂತಿಯನ್ನು ಆಚರಿಸಲಾಯಿತು. ಬಳಗದ ಶೇಷಾದ್ರಿ ಅಯ್ಯಂಗಾರ್, ರವಿಶಂಕರ್ ಮೋಹನ್, ಸುಧೀಂದ್ರ ರಾವ್, ಪುಷ್ಪಾ ರಾವ್, ರಾಮಕೃಷ್ಣ ಮತ್ತು ಪಾರ್ಥಸಾರಥಿ ಅಯ್ಯಂಗಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.