ADVERTISEMENT

ಬೆಂಗಳೂರು : 'ಇಂಥಾ ರಸ್ತೆಗಾ ನಾವ್ ಟ್ಯಾಕ್ಸ್ ಕಟ್ಟೋದು?'

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2022, 8:31 IST
Last Updated 23 ಅಕ್ಟೋಬರ್ 2022, 8:31 IST

ಹದಗೆಟ್ಟ ಮತ್ತು ಅಡಿಗಡಿಗೆ ಗುಂಡಿಬಿದ್ದ ರಸ್ತೆಗಳ ಪರಿಣಾಮ ಬೆಂಗಳೂರಿನಲ್ಲಿ ವಾಹನ ಸಂಚಾರಕ್ಕೆ ಹರಸಾಹಸವನ್ನೇ ಮಾಡಬೇಕಾಗಿದೆ. ಗುಂಡಿ ಗಂಡಾಂತರದಿಂದ ವರ್ಷದಲ್ಲಿ ಐವರು ಸಾವಿಗೀಡಾಗಿದ್ದಾರೆ. ಐದು ವರ್ಷಗಳಲ್ಲಿ ಬೆಂಗಳೂರು ರಸ್ತೆ ಅಭಿವೃದ್ಧಿಗಾಗಿಯೇ ₹20,060 ಕೋಟಿ ಖರ್ಚು ಮಾಡಲಾಗಿದೆ ಎಂದು ಕಳೆದ ವರ್ಷ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸದನದಲ್ಲಿ ಹೇಳಿದ್ದರು. ಆದರೂ, ಬೆಂಗಳೂರಿನಲ್ಲಿ ಸಾವಿರಾರು ರಸ್ತೆ ಗುಂಡಿಗಳಿವೆ. ಇಂಥಾ ರಸ್ತೆಗಾಗಿಯೇ ನಾವು ತೆರಿಗೆ ಕಟ್ಟುತ್ತಿರುವುದು ಎಂದು ಪ್ರಶ್ನಿಸುತ್ತಿದ್ದಾರೆ ಬೆಂಗಳೂರು ನಾಗರಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.