ADVERTISEMENT

ಕೃಷಿ ಮೇಳ: ಗಮನಸೆಳೆದ ‘ಕೋಳಿ ಪ್ರಪಂಚ’

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 21:24 IST
Last Updated 4 ನವೆಂಬರ್ 2022, 21:24 IST
   

ಬೆಂಗಳೂರು: ಕೋಳಿ ಮಾಂಸ ಹಾಗೂ ಮೊಟ್ಟೆ ಏಕೆ ತಿನ್ನಬೇಕು? ಆರೋಗ್ಯಕ್ಕೆ ಆಗುವ ಪ್ರಯೋಜನಗಳೇನು ? ಕೋಳಿ ಸಾಕಿದರೆ ಲಾಭವೆಷ್ಟು ? ಪೌಲ್ಟ್ರಿ ಉದ್ಯಮ ಆರಂಭಿಸುವುದು ಹೇಗೆ ?... ಇತ್ಯಾದಿ ಪ್ರಶ್ನೆಗಳಿಗೆ ‘ಕೋಳಿ ಪ್ರಪಂಚ’ವೇ ಉತ್ತರಿಸಿತು.

ಕೃಷಿ ಮೇಳದಲ್ಲಿ ಪ್ರಮುಖ ಆಕರ್ಷಣೆ ಆಗಿರುವ ‘ಕೋಳಿ ಪ್ರಪಂಚ’ ಮಳಿಗೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬೃಹತ್ ಗಾತ್ರದ ‘ಕೋಳಿ’ ಆಕೃತಿ ಮೂಲಕ ಪ್ರಪಂಚದೊಳಗೆ ಹೋಗುವ ಜನರಿಗೆ, ಕುಕ್ಕುಟೋದ್ಯಮದ ಇತಿಹಾಸವೇ ತೆರೆದುಕೊಳ್ಳುತ್ತದೆ.

ಭಾರತೀಯ ಕುಕ್ಕುಟೋದ್ಯಮ ಪಿತಾಮಹ ಡಾ. ಬಿ.ವಿ. ರಾವ್ ಅವರು ಉದ್ಯಮಕ್ಕೆ ನೀಡಿದ ಕೊಡುಗೆಗಳ ಚಿತ್ರಣ ವನ್ನು ಮಳಿಗೆಯಲ್ಲಿ ಕಟ್ಟಿ ಕೊಡಲಾಗಿದೆ. ಬ್ರಾಯ್ಲರ್, ನಾಟಿ, ಗಿರಿರಾಜ್ ಹಾಗೂ ಇತರೆ ತಳಿಯ ಕೋಳಿಗಳನ್ನು ಪ್ರದರ್ಶ
ನಕ್ಕೆ ಇರಿಸಲಾಗಿದೆ. ಅವುಗಳ ಮೊಟ್ಟೆಗಳೂ ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿವೆ. ಭಾರತದಲ್ಲಿ ಮಾಂಸಾಹಾರಿಗಳ ಸಂಖ್ಯೆ ಹೆಚ್ಚುತ್ತಿರುವ ಮಾಹಿತಿಯನ್ನು ದಾಖಲೆ ಸಮೇತ ವಿವರಿಸಲಾಗಿದೆ.

ADVERTISEMENT

‘ಕೋಳಿ ಮಾಂಸ ಸೇವನೆಯಿಂದ ಸದೃಢ ಆರೋಗ್ಯ ಹೊಂದಬಹುದು. ಕೋಳಿ ಮಾಂಸ– ಮೊಟ್ಟೆ ಸೇವಿಸುವವರ ಪ್ರಮಾಣ ಹೆಚ್ಚುತ್ತಿದೆ. ಕುಕ್ಕುಟೋದ್ಯಮವೂ ಅಭಿವೃದ್ಧಿಯಾಗುತ್ತಿದ್ದು, ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಉದ್ಯಮದ ಬಗ್ಗೆ ಸಕಲ ಮಾಹಿತಿ ನೀಡಲು ಮಳಿಗೆ ತೆರೆಯಲಾಗಿದೆ’ ಎಂದು ಪಶುವೈದ್ಯ ತಜ್ಞರ ಒಕ್ಕೂಟದ ಅಧ್ಯಕ್ಷ ಡಾ. ಜಿ. ದೇವೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.