ಬೆಂಗಳೂರು: ಬೆಸ್ಕಾಂ ವಿದ್ಯುತ್ ಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಜ.6ರಿಂದ 12ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ವ್ಯತ್ಯಯವಾಗುವ ಸ್ಥಳಗಳು: 6ರಂದು ಗಿರಿನಗರ ಮೂರನೇ ಹಂತ, 7ರಂದು ಆವಲಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು, 8 ಮುನೇಶ್ವರ ಬ್ಲಾಕ್ ಮತ್ತು ಆವಲಹಳ್ಳಿ,9ರಂದು ಜೆ.ಪಿ.ನಗರ ಮೂರನೇ ಹಂತ, ಎನ್.ಎಸ್.ಪಾಳ್ಯ, ಬಿಟಿಎಂ ಬಡಾವಣೆ, ಐಎಎಸ್–ಕೆಎಎಸ್ ಕಾಲೊನಿ, ಮೈಕೊ ಬಡಾವಣೆ, ಬನ್ನೇರುಘಟ್ಟ ರಸ್ತೆ, 11 ಮತ್ತು 12ರಂದು ಕಾಳಿದಾಸ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.