ಬೆಂಗಳೂರು: ‘ಮಹಿಳಾ ಕಾವ್ಯ ಎನ್ನುವುದು ಕೇವಲ ಕನಸುಗಳ ಲೋಕವಲ್ಲ. ಅದು ಅವಳು ಸಾಗಿ ಬಂದ ಹೋರಾಟ, ಸಂಕಷ್ಟದ ಆತ್ಮಕಥನ ಕೂಡ’ ಎಂದು ವಕೀಲೆ ಪ್ರಮಿಳಾ ನೇಸರ್ಗಿ ಹೇಳಿದರು.
ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ದೇವಿಕ. ಎಸ್ ಅವರ ‘ಕೊಳಲ ಕನವರಿಕೆ’ ಕವನ ಸಂಕಲನದ ಜನಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ಸೋಮಶೇಖರ್, ‘ಪ್ರಸ್ತುತ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿಹೋಗದೆ, ಕಾವ್ಯ, ಕೃತಿ ರಚನೆಯಲ್ಲಿ ತೊಡಗುವುದು ಆರೋಗ್ಯಕರ ಬೆಳವಣಿಗೆ’ ಎಂದರು.
ಚಿಂತಕರಾದ ಜಂಬುನಾಥ ಮಳಿಮಠ, ಲೇಖಕರಾದ ರಾಜಶೇಖರಯ್ಯ ಮಠಪತಿ, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ವಿಮರ್ಶಕ ಬೈರಮಂಗಲ ರಾಮೇಗೌಡ, ಜ್ಞಾನ ಸಂಬುದ್ಧ ಪ್ರಕಾಶನದ ವಿಶ್ವನಾಥ್ ಗುಂಡಿಗೆರೆ, ಸ್ಮಿತಾ ಎಂ. ಭಾವಿಕಟ್ಟಿ ಉಪಸ್ಥಿತರಿದ್ದರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಪ್ರೊ. ಜಾಜಿ ದೇವೇಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.