ADVERTISEMENT

ಶಾಲಾ ವಾಹನ ಚಾಲಕರ ಸಮಾವೇಶ 23ಕ್ಕೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 18:50 IST
Last Updated 19 ಅಕ್ಟೋಬರ್ 2019, 18:50 IST

ಬೆಂಗಳೂರು: ಅಸಂಘಟಿತ ವಲಯದ ಚಾಲಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ರೂಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ಸಂಯುಕ್ತ ಶಾಲಾ ಹಾಗೂ ಲಘು ವಾಹನ ಚಾಲಕರ ಸಂಘ ಇದೇ 23ರಂದು ಶಾಲಾ ವಾಹನ ಚಾಲಕರ ಸಮಾವೇಶ ಹಮ್ಮಿಕೊಂಡಿದೆ.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಸಂಘದ ಅಧ್ಯಕ್ಷಪಿ.ಎಸ್.ಷಣ್ಮುಗಂ,‘ಶಾಲಾ ವಾಹನ ಚಾಲಕರು ಮಕ್ಕಳನ್ನು ಶಾಲೆಗೂ–ಮನೆಗೂ ಸುರಕ್ಷಿತವಾಗಿ ಕರೆದೊಯ್ಯುವ ಜವಾಬ್ದಾರಿಯುತ ಸೇವೆಯಲ್ಲಿದ್ದಾರೆ. 2013ರಲ್ಲಿ ಸಾರಿಗೆ ಇಲಾಖೆ ಕರ್ನಾಟಕ ಸ್ಕೂಲ್‌ ಕ್ಯಾಬ್‌ ಯೋಜನೆಯ ಬಗ್ಗೆ ಆದೇಶ ಹೊರಡಿಸಿತ್ತು. ಆದರೆ, 5 ವರ್ಷವಾದರೂ ಅದು ಜಾರಿಯಾಗಿಲ್ಲ’ ಎಂದು ದೂರಿದರು.

‘ರಾಜ್ಯ ಸರ್ಕಾರಕೂಡಲೇ ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕು. ಶಾಲೆಗಳಿಂದ ವಾಹನಗಳಿಗೆ ಪರವಾನಗಿ ನೀಡಬೇಕು. ಶಾಲಾ ಒಡೆತನದ ವಾಹನಗಳಿಗೆ ನಿಗದಿ ಪಡಿಸಿರುವ ತೆರಿಗೆಯನ್ನೇ ಖಾಸಗಿ ವಾಹನಗಳಿಗೂ ನಿಗದಿ ಪಡಿಸಬೇಕು.ಖಾಸಗಿ ಶಾಲಾ ವಾಹನಗಳಿಗೆ ಶಾಲೆಗಳ ಸಮೀಪದಲ್ಲೇ ಪಾರ್ಕಿಂಗ್‌ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.