ADVERTISEMENT

ಗೃಹ ಕಾರ್ಮಿಕರ ಮಂಡಳಿ ರಚನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 16:58 IST
Last Updated 5 ಅಕ್ಟೋಬರ್ 2021, 16:58 IST

ಬೆಂಗಳೂರು: ‘ಅಸಂಘಟಿತರಾಗಿ ದುಡಿಯುತ್ತಿರುವ ಗೃಹ ಕಾರ್ಮಿಕರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಪ್ರತ್ಯೇಕ ಮಂಡಳಿ ರಚಿಸಬೇಕು’ ಎಂದು ರಾಷ್ಟ್ರೀಯ ಗೃಹ ಕಾರ್ಮಿಕರ ಕ್ಷೇಮಾಭಿವೃದ್ಧಿ ಟ್ರಸ್ಟ್‌ ಆಗ್ರಹಿಸಿದೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್‌ನ ರಾಜ್ಯ ಸಂಯೋಜಕಿ ಸಹಾಯ,‘ಗೃಹ ಕಾರ್ಮಿಕರಿಗೆ ಯೋಗ್ಯವಾದ ವೇತನ ಅಥವಾ ನಿರ್ದಿಷ್ಟ ಸಂಬಳ ಸಿಗುತ್ತಿಲ್ಲ. ಯಾವುದೇ ಸೌಲಭ್ಯಗಳಿಲ್ಲದೆ, ದುಡಿಯುತ್ತಿರುವ ಗೃಹ ಕಾರ್ಮಿಕರು ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಸರ್ಕಾರ ಮಾಸಿಕ ವೇತನವನ್ನು ನಿಗದಿ ಮಾಡಬೇಕು’ ಎಂದು ಒತ್ತಾಯಿಸಿದರು.

‘ಮನೆ ಕೆಲಸಗಾರರಿಗೆ ವಾರದ ರಜೆ ಮತ್ತು ವೇತನ ಸಹಿತ ವಾರ್ಷಿಕ 15 ದಿನಗಳ ರಜೆ ಸೌಲಭ್ಯ ಒದಗಿಸಬೇಕು.ವೃದ್ಧರಿಗೆ ಮತ್ತು ವಿಧವೆಯರಿಗೆ ಪಿಂಚಣಿ ಸೌಲಭ್ಯ, ಇಎಸ್‌ಐ ಮತ್ತು ಪಿಎಫ್ ಸೌಲಭ್ಯವನ್ನೂ ನೀಡಬೇಕು. ವಸತಿ ರಹಿತ ಗೃಹ ಕಾರ್ಮಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕು. ಸರ್ಕಾರದಿಂದ ಗುರುತಿನ ಚೀಟಿ ವಿತರಿಸಬೇಕು’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.