ಆಹ್ವಾನ
ಬೆಂಗಳೂರು: ‘ಅನುಸಂಧಾನ್ ನ್ಯಾಷನಲ್ ರಿಸರ್ಚ್ ಆ್ಯಂಡ್ ಫೌಂಡೇಷನ್(ಎಎನ್‌ಆರ್‌ಎಫ್)’ ಅಡಿಯಲ್ಲಿ ಪ್ರತಿಷ್ಠಿತ ‘ಪ್ರೈಮ್‌ಮಿನಿಸ್ಟರ್ ಪ್ರೊಫೆಸರ್‌ಶಿಪ್’ ಯೋಜನೆಯ ನೋಡಲ್ ಸಂಸ್ಥೆಯಾಗಿ ಬೆಂಗಳೂರು ವಿಶ್ವವಿದ್ಯಾಲಯ ಆಯ್ಕೆಯಾಗಿದೆ.
ಈ ಯೋಜನೆಯಡಿ ಸಂಶೋಧಕರನ್ನು ಆಯ್ಕೆ ಮಾಡಿ, ಸಂಸ್ಥೆಯ ಸಂಶೋಧನಾ ಸಾಮರ್ಥ್ಯವನ್ನು ವೃದ್ಧಿಸಿ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಆದ್ಯತೆಯ ಸಂಶೋಧನಾ ಕ್ಷೇತ್ರಗಳಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ.
ಆಯ್ಕೆಯಾದ ಸಂಶೋಧಕರಿಗೆ ಪ್ರತಿ ವರ್ಷ ₹30 ಲಕ್ಷ ವೇತನ, ಭತ್ಯೆ ನೀಡಲಾಗುವುದು. ಜೊತೆಗೆ ₹24 ಲಕ್ಷ ಸಂಶೋಧನಾ ಅನುದಾನ ಮತ್ತು ಸಂಸ್ಥೆಗೆ ಪ್ರತಿ ವರ್ಷ ₹1 ಲಕ್ಷದಷ್ಟು ಮೇಲು ವೆಚ್ಚವನ್ನು ಭರಿಸುತ್ತದೆ. ಈ ಸಹಾಯಧನದ ಅವಧಿ ಐದು ವರ್ಷ.
ಆಯ್ಕೆಯಾದ ಸಂಶೋಧಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು, ಸಂಶೋಧನಾ ಪ್ರಕಟಣೆಗಳನ್ನು ಹೆಚ್ಚಿಸುವುದು ಮತ್ತು ವಿಶ್ವವಿದ್ಯಾಲಯ ಹಾಗೂ ಕೈಗಾರಿಕಾ ಸಂಸ್ಥೆಗಳ ನಡುವೆ ಕೊಂಡಿಯಾಗಿ ಕೆಲಸ ಮಾಡಬೇಕಾಗುತ್ತದೆ. ಈ ಯೋಜನೆಯು ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಮತ್ತು ಸಹಯೋಗದ ಸಂಶೋಧನಾ ಅವಕಾಶಗಳನ್ನು ನೀಡುತ್ತದೆ. ಜೊತೆಗೆ, ಜ್ಞಾನ ವಿನಿಮಯ ಮತ್ತು ದೀರ್ಘಕಾಲೀನ ಶೈಕ್ಷಣಿಕ ಸಂಬಂಧಗಳನ್ನು ಉತ್ತೇಜಿಸುತ್ತದೆ.
ನಿವೃತ್ತ ಅಧ್ಯಾಪಕರು ಅಥವಾ ವಿಜ್ಞಾನಿಗಳು, ಸಂಶೋಧಕರು ಮತ್ತು ಸಂಶೋಧನೆ ಹಾಗೂ ನವೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರು ಪ್ರೈಮ್ ಮಿನಿಸ್ಟರ್ ಪ್ರೊಫೆಸರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸುವ ವಿಧಾನ, ಷರತ್ತುಗಳು ಹಾಗೂ ಅರ್ಹತೆ ಮತ್ತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಎಎನ್‌ಆರ್‌ಎಫ್ ವೆಬ್‌ಸೈಟ್ https://www.anrfonline.in/ANRF/HomePage ಗೆ ಭೇಟಿ ನೀಡಬಹುದು.
ಹೆಚ್ಚಿನ ಮಾಹಿತಿಗೆ ಪ್ರೊ. ಅಶೋಕ್ ಡಿ. ಹಂಜಗಿ, ನಿರ್ದೇಶಕರು, ಪಿಎಂಎಬಿ, ಬೆಂಗಳೂರು ವಿಶ್ವವಿದ್ಯಾಲಯ, ಮೊಬೈಲ್: 9845634196 ಅಥವಾ vc@bub.ernet.in ಸಂಪರ್ಕಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.