ADVERTISEMENT

ಎಸ್‌ಬಿಐನಿಂದ ‘ಪ್ರಾಜೆಕ್ಟ್‌ ಕುಬೇರ್‌’ ಆರಂಭ

​ಪ್ರಜಾವಾಣಿ ವಾರ್ತೆ
Published 3 ಜೂನ್ 2023, 21:24 IST
Last Updated 3 ಜೂನ್ 2023, 21:24 IST
ಎಸ್‌ಬಿಐ: ಉಳಿತಾಯ ಖಾತೆ ಸ್ಥಗಿತ ಶುಲ್ಕ ರದ್ದು
ಎಸ್‌ಬಿಐ: ಉಳಿತಾಯ ಖಾತೆ ಸ್ಥಗಿತ ಶುಲ್ಕ ರದ್ದು   

ಬೆಂಗಳೂರು: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬೆಂಗಳೂರು ವೃತ್ತದ ವತಿಯಿಂದ ‘ಪ್ರಾಜೆಕ್ಟ್‌ ಕುಬೇರ್‌’ ಆರಂಭಿಸಲಾಗಿದೆ. 

ಈ ಯೋಜನೆಯಡಿ ನಾಲ್ಕು ವ್ಯವಹಾರ ಬ್ಯಾಂಕಿಂಗ್‌ ಹಬ್‌ ಹಾಗೂ ಒಂದು ಕಾರ್ಪೊರೇಟ್‌ ಪ್ಯಾಕೇಜ್‌ ಹಬ್‌ ಕಾರ್ಯನಿರ್ವಹಿಸಲಿದ್ದು, ಗ್ರಾಹಕರಿಗೆ ಹಲವು ರೀತಿಯ ಸೌಲಭ್ಯಗಳನ್ನು ನೀಡಲಿವೆ.

ಎಸ್‌ಬಿಐ ಬೆಂಗಳೂರು ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ನಂದ್‌ಕಿಶೋರ್‌ ಅವರು ಈ ಹಬ್‌ಗಳಿಗೆ ಮೈಸೂರು ಬ್ಯಾಂಕ್‌ ವೃತ್ತದಲ್ಲಿರುವ ಎಸ್‌ಬಿಐ ಆಡಳಿತ ಕಟ್ಟಡದಲ್ಲಿ ಜೂನ್‌ 2ರಂದು ಚಾಲನೆ ನೀಡಿದರು. ಪ್ರಧಾನ ವ್ಯವಸ್ಥಾಪಕ (ನೆಟ್‌ವರ್ಕ್‌ 2) ಸಂದೀಪ್‌ ಭಟ್ನಾಗರ್‌, ಪ್ರಧಾನ ವ್ಯವಸ್ಥಾಪಕರಾದ ರಿಮ್‌ಝಿಮ್‌ ಛಬ್ರಾ, ಮುರಳಿ ಕೃಷ್ಣ ಇದ್ದರು.

ADVERTISEMENT

ವ್ಯವಹಾರ ಬ್ಯಾಂಕಿಂಗ್‌ ಹಬ್‌ಗಳು ಕಾರ್ಪೊರೇಟ್‌ ಗ್ರಾಹಕರಿಗೆ ಖಾತೆ ತೆರೆಯುವುದರಿಂದ ಹಿಡಿದು ಎಸ್‌ಬಿಐನ ಡಿಜಿಟಲ್‌ ಸೌಲಭ್ಯಗಳನ್ನು ಒದಗಿಸಲಿವೆ. ಈ ಹಬ್‌ಗಳು ಎಲ್ಲ ರೀತಿಯ ಪಾವತಿ ಮತ್ತು ಸಂಗ್ರಹಕ್ಕೆ ಏಕತಾಣವಾಗಿ ಕಾರ್ಯನಿರ್ವಹಿಸಲಿವೆ.

ಕಾರ್ಪೊರೇಟ್‌ ಸ್ಯಾಲರಿ ಪ್ಯಾಕೇಜ್‌ನಡಿ ಎಸ್‌ಬಿಐ ತನ್ನ ಗ್ರಾಹಕರಿಗೆ ವಿಸ್ತಾರ ಶ್ರೇಣಿಯ ಕೊಡುಗೆಗಳನ್ನು ವೇತನ ಖಾತೆಗೆ ನೀಡಲಿದೆ. ಈ ಹಬ್‌ ಯುವ ವೃತ್ತಿಪರರನ್ನು ಒಳಗೊಂಡಿದ್ದು, ವೇತನ ಖಾತೆ ಹೊಂದಿದವರಿಗೆ ಮೀಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.