ADVERTISEMENT

ಮಲ್ಲಣ್ಣ ಎಸ್‌.ಮದ್ದಾರ್ಕಿಗೆ ಸೇರಿದ ₹85 ಲಕ್ಷ ಮೌಲ್ಯದ ಆಸ್ತಿ ಮುಟ್ಟುಗೋಲು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 20:56 IST
Last Updated 9 ಸೆಪ್ಟೆಂಬರ್ 2025, 20:56 IST
<div class="paragraphs"><p>ಇ.ಡಿ</p></div>

ಇ.ಡಿ

   

ಬೆಂಗಳೂರು: ವೈದ್ಯಕೀಯ ಪದವಿ ವಿದ್ಯಾರ್ಥಿಗಳ ₹33.34 ಕೋಟಿ ಮೊತ್ತದಷ್ಟು ಸ್ಟೈಫಂಡ್‌ ಕಬಳಿಸಿದ್ದ
ಪ್ರಕರಣದಲ್ಲಿ ಹೈದರಾಬಾದ್‌ ಎಜುಕೇಶನ್‌ ಸೊಸೈಟಿಯ ಸೂಪರಿಂಟೆಂಡೆಂಟ್‌ ಮಲ್ಲಣ್ಣ ಎಸ್‌.ಮದ್ದಾರ್ಕಿ ಅವರಿಗೆ ಸೇರಿದ ₹85 ಲಕ್ಷ ಮೌಲ್ಯದ ಆಸ್ತಿಯನ್ನು ಇ.ಡಿ ಮುಟ್ಟುಗೋಲು ಹಾಕಿಕೊಂಡಿದೆ.

ಹೈದರಾಬಾದ್‌ ಎಜುಕೇಶನ್‌ ಸೊಸೈಟಿಯ ಎಂ. ಆರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಸ್ಟೈಫಂಡ್‌ ಅನ್ನು ಸೊಸೈಟಿಯ ಅಧ್ಯಕ್ಷ ಭೀಮಾಶಂಕರ್ ಬಿಳಗುಂಡಿ, ಮಲ್ಲಣ್ಣ ಮತ್ತು ಕೆನರಾ ಬ್ಯಾಂಕ್‌ನ ನೌಕರ ಎಸ್‌.ಎಂ. ಪಾಟೀಲ ಸೇರಿ ಕಬಳಿಸಿದ್ದರು ಎಂದು ಇ.ಡಿ ಹೇಳಿದೆ.

ADVERTISEMENT

ಆರೋಪಿಗಳು, ಕೋರ್ಸ್‌ಗೆ ದಾಖಲಾತಿ ಸಂದರ್ಭದಲ್ಲೇ ವಿದ್ಯಾರ್ಥಿಗಳಿಂದ ಖಾಲಿ ಚೆಕ್‌ಗಳಿಗೆ ಸಹಿ ಮಾಡಿಸಿಕೊಂಡಿದ್ದರು. ನಂತರ ವಿದ್ಯಾರ್ಥಿಗಳಿಗೆ ಬಂದ ಸ್ಟೈಫಂಡ್‌ ಅನ್ನು ತಾವೇ ಡ್ರಾ ಮಾಡಿಕೊಂಡಿದ್ದರು. 2018ರಿಂದ 2024ರ ಅವಧಿಯಲ್ಲಿ ಒಟ್ಟು ₹34.34 ಕೋಟಿ ಕಬಳಿಸಿದ್ದರು ಎಂದು ವಿವರಿಸಿದೆ.

ಈ ಪ್ರಕರಣದಲ್ಲಿ ಭೀಮಾಶಂಕರ್ ಗೆನಸೇರಿದ ₹5.87 ಕೋಟಿ ಮೊತ್ತದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.