ADVERTISEMENT

ಹೈಟೆಕ್ ವೇಶ್ಯಾವಾಟಿಕೆ: ಬಂಧನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 19:54 IST
Last Updated 8 ಫೆಬ್ರುವರಿ 2020, 19:54 IST

ಬೆಂಗಳೂರು: ಅಂತರ್ಜಾಲ ಸೇವೆಯನ್ನು ಬಳಸಿ ಹೈಟೆಕ್ ಮಾದರಿಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರಾಜಾಜಿನಗರದ ಕುಮಾರ್ ಅಲಿಯಾಸ್‌ ಅಂಕಲ್‌ ಕುಮಾರ್‌ (38), ಬಿಟಿಎಂ ಲೇಔಟ್‌ನ ಭರತ್‌ಕುಮಾರ್‌ (36), ಈಜೀಪುರದ ರಘು ಅಲಿಯಾಸ್‌ ರಾಜೇಶ್‌ (38) ಮತ್ತು ಚಿಕ್ಕನಹಳ್ಳಿಯ ಪ್ರಜ್ವಲ್ (36) ಬಂಧಿತರು.

‘ಉದ್ಯೋಗದ ಆಮಿಷ ಒಡ್ಡಿ ಮುಂಬೈ ಸೇರಿ ವಿವಿಧ ನಗರಗಳಿಂದ ಯುವತಿಯರನ್ನು ನಗರಕ್ಕೆ ಕರೆಸಿಕೊಳ್ಳುತ್ತಿದ್ದರು. ಅವರ ಫೋಟೊಗಳನ್ನು ಆನ್‌ಲೈನ್ ಮೂಲಕ ಕಳುಹಿಸಿ ಗ್ರಾಹಕರನ್ನು‌ ಸೆಳೆಯುತ್ತಿದ್ದರು. ಪ್ರತಿ ಗ್ರಾಹಕರಿಂದ ₹ 15 ಸಾವಿರದಿಂದ ₹ 20 ಸಾವಿರದವರೆಗೆ ಹಣ ಪಡೆಯುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಆರೋಪಿಗಳ ದೊಡ್ಡ ಜಾಲವಿದ್ದು, ವಿವಿಧ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ. ಹಲವು ವರ್ಷಗಳಿಂದ ಬೇರೆ ಬೇರೆ ಹೆಸರುಗಳಡಿ ದಂಧೆ ನಡೆಸುತ್ತಿದ್ದರು. ಪೊಲೀಸರ ಕೈಗೆ ಸಿಗದೆ ಓಡಾಡುತ್ತಿದ್ದರು’ ಎಂದೂ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.