ADVERTISEMENT

ಶುಲ್ಕ ಹೆಚ್ಚಳ: ಪೋಷಕರ ಪ್ರತಿಭಟನೆ

ವಿದ್ಯಾನಿಕೇತನ ಪಬ್ಲಿಕ್ ಶಾಲೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2018, 19:11 IST
Last Updated 23 ಜೂನ್ 2018, 19:11 IST
ಪೋಷಕರು ಪ್ರತಿಭಟನೆ ನಡೆಸಿದರು
ಪೋಷಕರು ಪ್ರತಿಭಟನೆ ನಡೆಸಿದರು   

ಕೆಂಗೇರಿ: ಉಲ್ಲಾಳ ಮುಖ್ಯ ರಸ್ತೆಯ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಅವೈಜ್ಞಾನಿಕವಾಗಿ ಶುಲ್ಕ ಹೆಚ್ಚಿಸಲಾಗಿದೆ ಎಂದು ಆರೋಪಿಸಿ ಪೋಷಕರು ಶನಿವಾರ ಪ್ರತಿಭಟನೆ ನಡೆಸಿದರು.

ಬೋಧನಾ ಶುಲ್ಕ, ಪ್ರವೇಶ ಶುಲ್ಕ, ದಾಖಲಾತಿ ಶುಲ್ಕ, ಕ್ರೀಡಾ ಶುಲ್ಕ, ಕಟ್ಟಡ ಅಭಿವೃದ್ಧಿ ಶುಲ್ಕ.. ಹೀಗೆ ಶುಲ್ಕಗಳನ್ನು ಮನಬಂದಂತೆ ಪ್ರತಿವರ್ಷ ಹೆಚ್ಚಿಸುತ್ತಿದ್ದಾರೆ ಎಂದು ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ₹2600 ಇದ್ದ ತಿಂಗಳ ಶುಲ್ಕವನ್ನು ₹4600ಕ್ಕೆ ಹೆಚ್ಚಿಸಿದ
ಶಾಲೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ‘ಶಾಲೆಗೆ ನೋಟಿಸ್ ನೀಡಲಾಗುವುದು, ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ನೀಡಲಾಗುವುದು’ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT