ADVERTISEMENT

ಕೋವಿಡ್‌–19: ಶಿಷ್ಟಾಚಾರ ರೂಪಿಸುತ್ತಿರುವ ಸರ್ಕಾರ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 20:47 IST
Last Updated 5 ಏಪ್ರಿಲ್ 2020, 20:47 IST

ಬೆಂಗಳೂರು: ಕೋವಿಡ್‌–19 ತೀವ್ರ ಪ್ರಮಾಣದಲ್ಲಿ ಹರಡಿದಲ್ಲಿ ಅದನ್ನು ನಿಯಂತ್ರಿಸಲು ಮಾನವ ಸಂಪನ್ಮೂಲ ಹಂಚಿಕೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೆಲವು ಶಿಷ್ಟಾಚಾರಗಳನ್ನು ರೂಪಿಸುತ್ತಿದೆ.

‘ಫಿವರ್ ಕ್ಲಿನಿಕ್‍ಗಳಿಂದ ಹಿಡಿದು, ಕೋವಿಡ್ ಆಸ್ಪತ್ರೆಗಳಲ್ಲಿ ತೀವ್ರನಿಗಾ ಘಟಕಗಳವರೆಗೆ ಆರೋಗ್ಯ ಸೌಲಭ್ಯಗಳು ತಡೆರಹಿತವಾಗಿ ಮತ್ತು ಸರಾಗವಾಗಿ ನಡೆಯಲು ಅಗತ್ಯವಾಗುವ ಸಿಬ್ಬಂದಿಯ ಪಾತ್ರ ಏನಿರಬೇಕು, ಅವರಿಗೆ ಯಾವ ಜವಾಬ್ದಾರಿ ವಹಿಸಬೇಕು ಎಂಬ ಬಗ್ಗೆ ಚರ್ಚಿಸಿ, ಶಿಷ್ಟಾಚಾರ ರೂಪಿಸಲಾಗುತ್ತಿದೆ’ ಎಂದು ಇಲಾಖೆಯ ಆಯುಕ್ತ ಪಂಕಜ್‌ಕುಮಾರ್ ಪಾಂಡೆ ತಿಳಿಸಿದರು.

‘ರೋಗಿಗಳಿಗೆ ಪರೀಕ್ಷೆ ಮತ್ತು ಮೂರನೇ ಹಂತದ ಸೌಲಭ್ಯಗಳಿಗೆ ಶಿಫಾರಸು ಮಾಡಲಾಗುವುದು. ಹೆಚ್ಚಿನ ಪ್ರಕರಣಗಳು ಕಂಡುಬಂದ ವೇಳೆ ನೆರವಿಗೆ ಧಾವಿಸುವ ಸ್ವಯಂ ಸೇವಕರ ಪಟ್ಟಿ ಮಾಡಲು ಕೂಡ ಸರ್ಕಾರ ಯೋಜಿಸಿದೆ. ಈ ಕಾರ್ಯಗಳನ್ನು ನಡೆಸಲು ಅವರಿಗೆ ತರಬೇತಿ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ನಂತರದ ಪರೀಕ್ಷೆಗಳನ್ನು ನಿಭಾಯಿಸಲು ಸಮುದಾಯ ನಿರ್ವಹಣಾ ತಂಡಗಳೊಂದಿಗೆ ಕೈಗೂಡಿಸಲು ಶಿಷ್ಟಾಚಾರಗಳು ಅವಕಾಶ ಮಾಡಿಕೊಡುತ್ತವೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.