ADVERTISEMENT

ನೇತ್ರದಾನಕ್ಕೆ ಮುಂದಾದ ಐಟಿ ಉದ್ಯೋಗಿಗಳು

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 19:34 IST
Last Updated 9 ಜುಲೈ 2022, 19:34 IST
ನೇತ್ರದಾನ ಅಭಿಯಾನಕ್ಕೆ ಸೇಪಿಯನ್ಸ್ ಇಂಟರ್ ನ್ಯಾಷನಲ್ ಕಾರ್ಪೊರೇಷನ್ ಲಿಮಿಟೆಡ್‌ನ ಬೆಂಗಳೂರಿನ ಮುಖ್ಯಸ್ಥ ಅಭೀರ್ ಮುಸ್ತಾಫಿ ಚಾಲನೆ ನೀಡಿದರು. ಏಷ್ಯಾ ಮತ್ತು ಹೆಡ್ ಸ್ಪೈನ್ಸನ ಪ್ರಾದೇಶಿಕ ವ್ಯವಸ್ಥಾಪಕ ಸುರ್ಜಿತ್ ಬಸು, ರತಿಕಾ ಗಂದೋತ್ರ, ಜೆ.ಶ್ವೇತಾ, ಕೆ.ಎಂ ಗಿರೀಶ್ ಇದ್ದರು.

ಕೆ.ಆರ್.ಪುರ: ಸೇಪಿಯನ್ಸ್ ಇಂಟರ್‌ನ್ಯಾಷನಲ್ ಕಾರ್ಪೊರೇಷನ್‌ನ ಉದ್ಯೋಗಿಗಳು ನೇತ್ರದಾನ ಮಾಡಲು ಮುಂದಾಗಿದ್ದಾರೆ.

ನೇತ್ರದಾನ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಅಭೀರ್ ಮುಸ್ತಾಫಿ, ’ಪುನೀತ್ ರಾಜ್‍ಕುಮಾರ್ ಅವರ ಪ್ರೇರಣೆಯಿಂದ ನಮ್ಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಎರಡು ಸಾವಿರಕ್ಕೂ ಹೆಚ್ಚಿನ ಉದ್ಯೋಗಿಗಳು ನೇತ್ರದಾನ ಮಾಡಲು ಮುಂದಾಗಿದ್ದೇವೆ. ಅಭಿಯಾನದ ಮೊದಲ ದಿನವಾಗಿ 200 ಉದ್ಯೋಗಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ‘ ಎಂದು ಹೇಳಿದರು.

ಕೊರೊನಾದಿಂದಾಗಿ ಮನೆಯಿಂದಲೇ ಕೆಲಸ ಮಾಡುತ್ತಿರುವ ಅನ್ಯ ರಾಜ್ಯದ ಉದ್ಯೋಗಿಗಳಿಗೂ ಇ–ಮೇಲ್ ಮೂಲಕ ಅಭಿಯಾನಕ್ಕೆ ಕೈಜೋಡಿಸುವಂತೆ ಕೋರಿಕೆ ಸಲ್ಲಿಸಿಲಾಗಿತ್ತು. ಅವರು ಅಭಿಯಾನದ ಭಾಗವಾಗಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.