ADVERTISEMENT

‘ನೇತಾಜಿ ಜನ್ಮದಿನ ದೇಶಪ್ರೇಮ ದಿನವಾಗಲಿ’

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 17:08 IST
Last Updated 23 ಜನವರಿ 2021, 17:08 IST
ಶಿಬಿರದಲ್ಲಿ ಹಲವು ಯುವಕರು ರಕ್ತದಾನ ಮಾಡಿದರು
ಶಿಬಿರದಲ್ಲಿ ಹಲವು ಯುವಕರು ರಕ್ತದಾನ ಮಾಡಿದರು   

ರಾಜರಾಜೇಶ್ವರಿನಗರ: ‘ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಜನ್ಮದಿನವನ್ನು ದೇಶಪ್ರೇಮ ದಿನವನ್ನಾಗಿ ಆಚರಿಸಲು ಕೇಂದ್ರ ಮತ್ತು ರಾಜ್ಯಸರ್ಕಾರ ಕ್ರಮ ತೆಗೆದುಕೊಳ್ಳಬೇಕು’ ಎಂದು ನೇತಾಜಿ ಸುಭಾಷ್ ಚಂದ್ರಬೋಸ್ ಸಂಶೋಧನೆ ಮತ್ತು ಅಭಿವೃದ್ಧಿ ಟ್ರಸ್ಟ್‌ನ ಉಪಾಧ್ಯಕ್ಷ ಎಂ.ರಾಜ್‍ಕುಮಾರ್ ಆಗ್ರಹಿಸಿದರು.

ಭಾರತೀಯ ರೆಡ್‌ಕ್ರಾಸ್ ಹಾಗೂ ಟ್ರಸ್ಟ್‌ ವತಿಯಿಂದ ನೇತಾಜಿ ಜನ್ಮದಿನ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ‘ದೇಶದಲ್ಲಿಯೇ ಸುಭಾಷ್‍ಚಂದ್ರ ಬೋಸ್ ಅವರ ಪ್ರತಿಮೆ ಹಾಗೂ ಅವರ ಹೆಸರಿನಲ್ಲಿ ಭವನಗಳು ತೀರಾ ವಿರಳವಾಗಿದ್ದ ಸಂದರ್ಭದಲ್ಲಿ ಟ್ರಸ್ಟ್‌ ವತಿಯಿಂದ ರಾಜರಾಜೇಶ್ವರಿನಗರದಲ್ಲಿ ಸುಭಾಷ್ ಭವನ ನಿರ್ಮಿಸಿದ ಕೀರ್ತಿ ನಮ್ಮ ಟ್ರಸ್ಟ್‌ದು’ ಎಂದರು.

ಟ್ರಸ್ಟ್‌ನ ಅಧ್ಯಕ್ಷ ಶಿವಶಂಕರ್, ‘ನೇತಾಜಿ ಬ್ರಿಟಿಷರಿಗೆ ಸಿಂಹ ಸ್ವಪ್ನರಾಗಿದ್ದರು. ವಿಶ್ವದೆಲ್ಲೆಡೆ ದೇಶಭಕ್ತಿಯನ್ನು ಪ್ರಚಾರ ಮಾಡಿದ ಅಪ್ರತಿಮ ವ್ಯಕ್ತಿತ್ವ ಅವರದು’ ಎಂದರು.

ADVERTISEMENT

ಟ್ರಸ್ಟ್‌ನ ಸದಸ್ಯರಾದ ವೀರಯ್ಯಶಾಸ್ತ್ರಿಮಠ ಗುರೂಜಿ, ಡಾ.ರಾಜು ಮಾತನಾಡಿದರು. ಶಿಬಿರದಲ್ಲಿ ಹಲವು ಯುವಕರು ರಕ್ತದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.