ADVERTISEMENT

ರೈಲು ಸಂಚಾರ ರದ್ದು: ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 20:30 IST
Last Updated 21 ಜೂನ್ 2020, 20:30 IST

ಬೆಂಗಳೂರು: ಬೆಂಗಳೂರಿನಿಂದ ಮೈಸೂರಿಗೆ ಬೆಳಿಗ್ಗೆ ಹೋಗುತ್ತಿದ್ದ ರೈಲಿನ ಸಂಚಾರವನ್ನು ನೈರುತ್ಯ ರೈಲ್ವೆ ರದ್ದುಗೊಳಿಸಿದೆ.

ಬೆಳಿಗ್ಗೆ 9.20ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 12.45ಕ್ಕೆ ಮೈಸೂರು ತಲುಪುತ್ತಿತ್ತು. ಮಧ್ಯಾಹ್ನ 1.45ಕ್ಕೆ ಮೈಸೂರಿನಿಂದ ಹೊರಟು ಸಂಜೆ 5 ಗಂಟೆಗೆ ಬೆಂಗಳೂರು ತಲುಪುತ್ತಿತ್ತು.

ಕೆಂಗೇರಿ, ರಾಮನಗರ, ಮದ್ದೂರು, ಮಂಡ್ಯ, ಪಾಂಡವಪುರ, ನಾಗೇನಹಳ್ಳಿ ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆಗೆ ಅವಕಾಶ ಇತ್ತು. ಈ ರೈಲು ಸಂಚಾರ ನಿಲ್ಲಿಸಿ, ಅದರ ಬದಲಿಗೆ ಬೆಳಿಗ್ಗೆ 6.45ಕ್ಕೆ ಮೈಸೂರಿನಿಂದ ಹೊರಟು 9.35 ಬೆಂಗಳೂರು ತಲುಪುವ ಮತ್ತು ಸಂಜೆ 6.15ಕ್ಕೆ ಬೆಂಗಳೂರಿನಿಂದ ಹೊರಟು 9.05ಕ್ಕೆ ಮೈಸೂರು ತಲುಪುವ ವಿಶೇಷ ರೈಲ ಸಂಚಾರವನ್ನು ಭಾನುವಾರದಿಂದ ಆರಂಭಿಸಲಾಗಿದೆ.

ADVERTISEMENT

‘ಈ ಹೊಸ ರೈಲಿನಿಂದ ಮೈಸೂರಿನಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ ಅನುಕೂಲವಾಗಿದೆ.ಆದರೆ, ಮೈಸೂರಿಗೆ ತೆರಳುವವರಿಗೆ ಅನುಕೂಲವಾಗಿಲ್ಲ. ಬೆಳಿಗ್ಗೆ ಮೈಸೂರಿಗೆ ಹೋಗಲು ಯಾವುದೇ ರೈಲು ಇಲ್ಲವಾಗಿದೆ. ಈ ಹಿಂದಿನ ರೈಲನ್ನೇ ಮುಂದುವರಿಸಬೇಕು’ ಎಂದು ರೈಲ್ವೆ ಹೋರಾಟಗಾರ ಕೃಷ್ಣಪ್ರಸಾದ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.