ADVERTISEMENT

ಬೆಂಗಳೂರು: ನಗರದ ಹಲವೆಡೆ ಮಳೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2023, 23:35 IST
Last Updated 13 ಸೆಪ್ಟೆಂಬರ್ 2023, 23:35 IST
<div class="paragraphs"><p>ನಗರದ ಅನಿಲ್ ಕುಂಬ್ಳೆ ವೃತ್ತದ ಬಳಿ ಬಂದ ಮಳೆಯಲ್ಲಿ ಜನರು ಸಾಗುತ್ತಿರುವ ದೃಶ್ಯ </p></div>

ನಗರದ ಅನಿಲ್ ಕುಂಬ್ಳೆ ವೃತ್ತದ ಬಳಿ ಬಂದ ಮಳೆಯಲ್ಲಿ ಜನರು ಸಾಗುತ್ತಿರುವ ದೃಶ್ಯ

   

–ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌

ಬೆಂಗಳೂರು: ನಗರದ ಹಲವೆಡೆ ಶುಕ್ರವಾರ ಸಂಜೆ ಬಿರುಗಾಳಿ ಸಹಿತ ಮಳೆಯಾಗಿ, ತಂಪೆರೆಯಿತು.

ADVERTISEMENT

ಮಧ್ಯಾಹ್ನದಿಂದ ಮೋಡಕವಿದ ವಾತಾವರಣವಿತ್ತು. ಸಂಜೆ ಸುರಿದ ಭಾರಿ ಮಳೆಯಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಬಿರುಗಾಳಿಯಿಂದ ಜನರು ತತ್ತರಿಸಿ, ಸುರಕ್ಷತಾ ಸ್ಥಳಗಳಿಗೆ ತೆರಳಲು ಪ್ರಯಾಸಪಟ್ಟರು.

ದಾಸರಹಳ್ಳಿ ಭಾಗದ ಶೆಟ್ಟಿಹಳ್ಳಿ (38.50 ಮಿ.ಮೀ), ಬಾಗಲಗುಂಟೆಯಲ್ಲಿ (37.50 ಮಿ.ಮೀ) ಅತಿಹೆಚ್ಚು ಮಳೆಯಾಗಿದೆ. ವಿಶ್ವನಾಥ ನಾಗೇನಹಳ್ಳಿ, ಕೊಡಿಗೆಹಳ್ಳಿ, ನಂದಿನಿ ಲೇಔಟ್‌, ಪೀಣ್ಯ ಕೈಗಾರಿಕೆ ಪ್ರದೇಶ, ಪುಲಕೇಶಿನಗರ, ಬಾಣಸವಾಡಿ, ನಾಗಪುರ, ದಯಾನಂದ ನಗರ, ಹೊರಮಾವು, ಸಂಪಂಗಿರಾಮನಗರ, ಚೊಕ್ಕಸಂದ್ರ, ಅಟ್ಟೂರು, ಕುಶಾಲನಗರ, ಮಾರತ್‌ಹಳ್ಳಿ, ಬೆನ್ನಿಗಾನಹಳ್ಳಿ, ಕಮ್ಮನಹಳ್ಳಿ, ಬ್ಯಾಟರಾಯನಪುರ, ವರ್ತೂರು, ಕೆ.ಆರ್‌. ಪುರ, ಅಗ್ರಹಾರ ದಾಸರಹಳ್ಳಿಯಲ್ಲಿ ಉತ್ತಮ ಮಳೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.