ADVERTISEMENT

ರೈನ್ ಬೋ ಮಕ್ಕಳ ಆಸ್ಪತ್ರೆ: 5 ಸಾವಿರ ಮಂದಿಗೆ ಲಸಿಕೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 18:50 IST
Last Updated 20 ಜೂನ್ 2021, 18:50 IST
ಲಸಿಕೆ ವಿತರಣಾ ಅಭಿಯಾನದಲ್ಲಿ ಜನರು ಲಸಿಕೆ ಪಡೆದುಕೊಂಡರು
ಲಸಿಕೆ ವಿತರಣಾ ಅಭಿಯಾನದಲ್ಲಿ ಜನರು ಲಸಿಕೆ ಪಡೆದುಕೊಂಡರು   

ಬೆಂಗಳೂರು: ರೈನ್ ಬೋ ಮಕ್ಕಳ ಆಸ್ಪತ್ರೆಯು ನಗರದಲ್ಲಿ ಭಾನುವಾರ ಆಯೋಜಿಸಿದ ಲಸಿಕೆ ವಿತರಣಾ ಅಭಿಯಾನದಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಲಸಿಕೆ ಪಡೆದುಕೊಂಡರು.

ಈ ಅಭಿಯಾನದಲ್ಲಿ ‘ಕೋವಿಶಿಲ್ಡ್’ ಮತ್ತು ‘ಕೋವ್ಯಾಕ್ಸಿನ್’ ಎರಡೂ ಲಸಿಕೆಯನ್ನು ನೀಡಲಾಯಿತು. 30 ಕೌಂಟರ್‌ಗಳಲ್ಲಿ 50ಕ್ಕೂ ಅಧಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹಾಗೆಯೇ, 10 ಕೇಂದ್ರಗಳನ್ನು ಲಸಿಕೆ ನೀಡಲು ಸಿದ್ಧಪಡಿಸಲಾಗಿತ್ತು.

ಈ ಬಗ್ಗೆ ಮಾತನಾಡಿದ ಆಸ್ಪತ್ರೆಯ ಮುಖ್ಯಸ್ಥ ನಿತ್ಯಾನಂದ, ‘ಕೋವಿಡ್‌ನಿಂದ ರಕ್ಷಣೆ ಪಡೆಯಲು ಲಸಿಕೆ ಸಹಕಾರಿ. ಜನತೆ ಲಸಿಕೆ ಪಡೆಯಲು ಕಾತುರರಾಗಿದ್ದಾರೆ. ಆದರೆ, ಎಲ್ಲೆಡೆ ಲಸಿಕೆ ದೊರೆಯುತ್ತಿಲ್ಲ. ಹೀಗಾಗಿ, ಹತ್ತು ದಿನಗಳಿಂದ ಲಸಿಕೆ ಅಭಿಯಾನ ನಡೆಸುತ್ತಿದ್ದೇವೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.