ADVERTISEMENT

ಸಂಗೀತೋತ್ಸವ ವೇದಿಕೆ ನಿರ್ಮಾಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 19:11 IST
Last Updated 7 ಫೆಬ್ರುವರಿ 2019, 19:11 IST
ಸಂಗೀತೋತ್ಸವದ ವೇದಿಕೆ ನಿರ್ಮಾಣ ಕಾಮಗಾರಿಗೆ ಥೀಮ್‌ ವರ್ಕ್‌ ಅನಾಲಿಟಿಕ್ಸ್‌ನ ಸ್ಥಾಪಕ ಡಾ.ಪಿ.ಬಾಲಸುಬ್ರಹ್ಮಣ್ಯಂ ಗುದ್ದಲಿ ಪೂಜೆ ನೆರವೇರಿಸಿದರು. ನಿವೃತ್ತ ರಾಜತಾಂತ್ರಿಕ ಅಧಿಕಾರಿ ಎಚ್‌.ಎಸ್‌. ನಾಗರಾಜ, ಎಸ್‌ಬಿಐ ನಿವೃತ್ತ ಅಧಿಕಾರಿ ಸುಂದರರಾಮನ್‌, ಅಮರನಾಥ್‌, ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ನ ನಿರ್ದೇಶಕ ಕೆ.ಎನ್‌. ಶಾಂತ್‌ಕುಮಾರ್‌, ಶ್ರೀರಾಮ ಸೇವಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ಎಸ್‌.ಎನ್‌.ವರದರಾಜ್‌ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಅಭಿಜಿತ್‌ ವರದರಾಜ್‌ ಹಾಜರಿದ್ದರು

ಬೆಂಗಳೂರು: ಶ್ರೀರಾಮ ಸೇವಾ ಮಂಡಳಿಯ‘81ನೇ ಶ್ರೀರಾಮನವಮಿ ಅಂತರರಾಷ್ಟ್ರೀಯ ಸಂಗೀತೋತ್ಸವ’ದ ವೇದಿಕೆ ಮತ್ತು ತಾತ್ಕಾಲಿಕ ಸಭಾಂಗಣ ನಿರ್ಮಾಣಕ್ಕೆ ಚಾಮರಾಜಪೇಟೆಯ ಹಳೆಕೋಟೆ ಹೈಸ್ಕೂಲ್‌ ಮೈದಾನದಲ್ಲಿ ಗುರುವಾರ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಇದು ದೇಶದ ಅತಿದೊಡ್ಡ ಶಾಸ್ತ್ರೀಯ ಸಂಗೀತೋತ್ಸವಗಳಲ್ಲಿ ಒಂದಾಗಿದ್ದು, ಏಪ್ರಿಲ್‌ 6ರಿಂದ ಮೇ6ರವರೆಗೆ ನಡೆಯಲಿದೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಮಂಡಳಿಯ ಪ್ರಧಾನ ಕಾರ್ಯದರ್ಶಿ ಎಸ್.ಎನ್.ವರದರಾಜ್,‘ಸುಮಾರು 10 ಸಾವಿರ ಮಂದಿ ಕುಳಿತು ಕಾರ್ಯಕ್ರಮ ವೀಕ್ಷಿಸಬಹುದಾದ ಪೆಂಡಾಲ್ ನಿರ್ಮಾಣ ಮಾಡಲಾಗುತ್ತದೆ. ಅದಕ್ಕೆ ₹30 ಲಕ್ಷ ವೆಚ್ಚವಾಗುತ್ತದೆ. ಕಾರ್ಯಕ್ರಮಕ್ಕೆ ಅಂದಾಜು ಒಂದೂವರೆ ಕೋಟಿ ರೂಪಾಯಿ ಖರ್ಚಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ಕರ್ನಾಟಕ ಮತ್ತು ಹಿಂದೂಸ್ತಾನಿ ಜುಗಲ್‌ಬಂದಿ ಈ ಬಾರಿಯ ವಿಶೇಷ. ಗಾಯಕಎಸ್‌.ಪಿ.ಬಾಲಸುಬ್ರಹ್ಮಣ್ಯ ಅವರು ಮೊದಲ ಬಾರಿಗೆ ಹಿಂದೂಸ್ತಾನಿ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ಸ್ಥಳೀಯ ಗಾಯಕರು ಸಂಗೀತಸುಧೆಯನ್ನು ಉಣಬಡಿಸಲಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.