ADVERTISEMENT

ರಾಮಯ್ಯ-ಎಸ್‍ಜಿಯು ಸಹಯೋಗದಲ್ಲಿ ವೈದ್ಯ ಪದವಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 20:35 IST
Last Updated 15 ಜುಲೈ 2020, 20:35 IST

ಬೆಂಗಳೂರು: ರಾಮಯ್ಯ ಸಮೂಹ ಸಂಸ್ಥೆಗಳು ಹಾಗೂ ಗ್ರೆನೆಡಾದ ಸೇಂಟ್ ಜಾರ್ಜ್ ವಿಶ್ವವಿದ್ಯಾಲಯದ (ಎಸ್‍ಜಿಯು) ಸಹಯೋಗದಲ್ಲಿ ಭಾರತ, ಅಮೆರಿಕ ಅಥವಾ ಇಂಗ್ಲೆಂಡ್ ವೈದ್ಯಕೀಯ ಶಿಕ್ಷಣ ವ್ಯವಸ್ಥೆಗಳ ಮೂಲಕ 5 ವರ್ಷದ ವೈದ್ಯಕೀಯ ಪದವಿ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ.

ದ್ವಿತೀಯ ಪಿಯು ತೇರ್ಗಡೆಯಾದವರು ಈ ವಿಧಾನದ ಮೂಲಕ ವೈದ್ಯಕೀಯ ಮಂಡಳಿ ಮಾನ್ಯತೆಯ ವೈದ್ಯಕೀಯ ಪದವಿ ಪಡೆಯಬಹುದು.

ವಿದ್ಯಾರ್ಥಿಗಳು ಬೆಂಗಳೂರಿನ ರಾಮಯ್ಯ ಸಂಸ್ಥೆಯಲ್ಲಿ ಮೊದಲ ವರ್ಷದ ವ್ಯಾಸಂಗ ಪೂರ್ಣಗೊಳಿಸಲಿದ್ದಾರೆ. ಗ್ರೆನೆಡಾದ ಮುಖ್ಯ ಕ್ಯಾಂಪಸ್‍ನಲ್ಲಿ ಎರಡನೇ ವರ್ಷದ ಶಿಕ್ಷಣ ಪೂರೈಸಲಿದ್ದಾರೆ. ಗ್ರೆನೆಡಾದಲ್ಲಿ ಮೂರನೇ ವರ್ಷದ ವ್ಯಾಸಂಗ ನಡೆಸಲಿದ್ದು, ಅಂತಿಮ ಎರಡು ವರ್ಷಗಳನ್ನು ರೊಟೇಷನ್ ಆಧಾರದಲ್ಲಿ ಅಮೆರಿಕ ಅಥವಾ ಇಂಗ್ಲೆಂಡ್‍ನಲ್ಲಿ ಕ್ಲಿನಿಕಲ್ ತರಬೇತಿ ಪಡೆಯಲಿದ್ದಾರೆ.

ADVERTISEMENT

ಈ ವಿದ್ಯಾರ್ಥಿಗಳು ಎಸ್‍ಜಿಯುದಿಂದ ಡಾಕ್ಟರ್ ಆಫ್ ಮೆಡಿಸಿನ್, ನಾರ್ತಂಬ್ರಿಯಾ ವಿಶ್ವವಿದ್ಯಾಲಯದ ಬ್ಯಾಚಲರ್ ಡಿಗ್ರಿ ಇನ್ ಬಯೋಮೆಡಿಕಲ್ ಸೈನ್ಸ್ ಹಾಗೂ ರಾಮಯ್ಯ ವಿಶ್ವವಿದ್ಯಾಲಯದ ಉನ್ನತ ಶಿಕ್ಷಣದ ಪದವಿ ಸೇರಿ ಮೂರು ವಿದ್ಯಾರ್ಹತೆಯನ್ನು ಏಕಕಾಲದಲ್ಲಿ ಪಡೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.