ರಾಜರಾಜೇಶ್ವರಿನಗರ: ಪ್ರಾಣಾಯಾಮ, ಧ್ಯಾನ, ಸೂರ್ಯ ನಮಸ್ಕಾರದಿಂದ ಆರೋಗ್ಯವಂತರಾಗಿ ಬದುಕಲು ಸಾಧ್ಯ ಎಂದು ಯೋಗ ಶಿಕ್ಷಕ ಅಮರಪ್ಪ ಮತ್ತು ಶಿಕ್ಷಕಿ ಪದ್ಮಕೃಷ್ಣ ಹೇಳಿದರು.
ಹೇರೋಹಳ್ಳಿಯ ಸಿಂಡಿಕೇಟ್ ಲೇಔಟ್‌ನ ಓಂ ಸೇವಾಕೇಂದ್ರದಲ್ಲಿ ರಥಸಪ್ತಮಿ ಅಂಗವಾಗಿ ಹಮ್ಮಿಕೊಂಡಿದ್ದ 24ನೇ ವರ್ಷದ 108 ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
76 ವರ್ಷದ ರಾಮಕೃಷ್ಣ ಭಟ್ ಮಾತನಾಡಿ, ಪ್ರತಿನಿತ್ಯ ಪ್ರಾಣಾಯಾಮ, ಸೂರ್ಯನಮಸ್ಕಾರ ಮಾಡುವ ಮೂಲಕ ಆರೋಗ್ಯವಾಗಿದ್ದೇನೆ ಎಂದರು.
ಮರಿಯಪ್ಪನಪಾಳ್ಯದ ಸೇಂಟ್ ಫಿಲೋಮಿನಾ ಶಾಲೆಯ ಆವರಣದಲ್ಲಿ 108 ಸೂರ್ಯ ನಮಸ್ಕಾರ ನಡೆಯಿತು.
ಮುಖಂಡ ಜಯರಾಮು ಮಾತನಾಡಿ, ಕಲುಷಿತ ಗಾಳಿ, ನೀರು, ರಾಸಾಯನಿಕಯುಕ್ತ ಆಹಾರ ಸೇವನೆಯಿಂದ ಚಿಕ್ಕ ವಯಸ್ಸಿನಲ್ಲಿಯೇ ಬೊಜ್ಜು, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಬರುತ್ತಿವೆ, ಮಿತ ಆಹಾರ, ಯೋಗ, ಧ್ಯಾನ, ಸೂರ್ಯ ನಮಸ್ಕಾರವೇ ಎಲ್ಲ ರೋಗಗಳಿಗೆ ಪರಿಹಾರ ಎಂದರು.
ಪತಂಜಲಿ ಯೋಗ ಶಿಕ್ಷಕರಾದ ಸರಸ್ವತಿ, ಲಿಂಗರಾಜು ಮಾರ್ಗದರ್ಶನದಲ್ಲಿ 108 ಸೂರ್ಯ ನಮಸ್ಕಾರ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.