ADVERTISEMENT

ಹೊಸಹಳ್ಳಿ ವೀರಭದ್ರಸ್ವಾಮಿ ವಿಜೃಂಭಣೆಯ ಬ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2022, 20:31 IST
Last Updated 24 ಮಾರ್ಚ್ 2022, 20:31 IST
ದೇವರ ಹೊಸಹಳ್ಳಿಯ ಭದ್ರಕಾಳಮ್ಮ ಹಾಗೂ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವ
ದೇವರ ಹೊಸಹಳ್ಳಿಯ ಭದ್ರಕಾಳಮ್ಮ ಹಾಗೂ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವ   

ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕು ಸೋಂಪುರ ಹೋಬಳಿಯ ಪ್ರಸಿದ್ಧ ದೇವರ ಹೊಸಹಳ್ಳಿಯ ಭದ್ರಕಾಳಮ್ಮ ಹಾಗೂ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವವು ಗುರುವಾರ ವಿಜೃಂಭಣೆಯಿಂದ ನೆರವೇರಿತು.

ಬೆಳಿಗ್ಗೆಯಿಂದ ದೇವರಿಗೆ ಶತರುದ್ರಾಭಿಷೇಕ ಹೋಮಾದಿಗಳು ನಡೆದು ಮೂಲ ನಕ್ಷತ್ರದ ಮಧ್ಯಾಹ್ನ 1 ರಿಂದ 1.30 ಗಂಟೆ ಒಳಗೆ ಶುಭಮಿಥುನ ಲಗ್ನದಲ್ಲಿ ಸಾವಿರಾರು ಭಕ್ತಾದಿಗಳ ಸಮೂಹದಲ್ಲಿ ಜಯಘೋಷದ ಮೂಲಕ ರಥ ಎಳೆಯಲಾಯಿತು. ನಾದಸ್ವರ, ತಾಳ್ಯ ವಾದ್ಯದೊಂದಿಗೆ 15ಕ್ಕೂ ಹೆಚ್ಚು ಮಂದಿ ವೀರಗಾಸೆಯವರೊಂದಿಗೆ ರಥೋತ್ಸವ ಕಳೆಗಟ್ಟಿತ್ತು. ರಥವನ್ನು ಬಣ್ಣ ಬಣ್ಣದ ವಸ್ತ್ರ, ಹೂವು, ತಳಿರು ತೋರಣ, ಎಳನೀರು ಗೊಂಚಲು, ಬಾಳೆಗೊನೆಗಳಿಂದ ಅಲಂಕರಿಸಲಾಗಿತ್ತು. ಭಕ್ತಾದಿಗಳು ರಥೋತ್ಸವವನ್ನು ಮತ್ತು ಅಲಂಕೃತ ದೇವರುಗಳನ್ನು ನೋಡಿ ಪುನೀತರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT