ಚಿತ್ರ ಕೃಪೆ: ಪುಷ್ಕರ್ ವಿ.
ಬೆಂಗಳೂರು: ಐಪಿಎಲ್‌ನ 18ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಆಗಿರುವ ಸಂಭ್ರಮವು ಹುಚ್ಚು ಉನ್ಮಾದಕ್ಕೆ ಕಾರಣವಾಯಿತು.
ಕೆ.ಆರ್. ಸರ್ಕಲ್‌ನಿಂದ ಎಂ.ಜಿ. ರಸ್ತೆವರೆಗೆ ರಸ್ತೆ ತುಂಬೆಲ್ಲ ಜನ ಸೇರಿದ್ದರು. ಆರ್‌ಸಿಬಿ, ಆರ್‌ಸಿಬಿ,.. ಕೊಹ್ಲಿ.. ಕೊಹ್ಲಿ... ಉದ್ಘೋಷಗಳು ಎಲ್ಲೆಡೆ ಮಾರ್ದನಿಸಿತು. ವಿಧಾನಸೌಧ, ಕಬ್ಬನ್‌ಪಾರ್ಕ್ ಸುತ್ತಮುತ್ತ ಜನಸಾಗರವೇ ನೆರೆದಿತ್ತು.
ಐಪಿಎಲ್ ಟ್ರೋಫಿಯನ್ನೇ ಹೋಲುವ ಟ್ರೋಫಿಗಳನ್ನು ಇಟ್ಟುಕೊಂಡು ಜೀಪು, ತೆರೆದ ಕಾರು, ಬೈಕ್‌ಗಳಲ್ಲಿ ಮೆರವಣಿಗೆ ಮಾಡಿದರು. ಆರ್‌ಸಿಬಿ ತಂಡದ ಚಿತ್ರವನ್ನು ಪ್ರದರ್ಶಿಸುತ್ತಾ ವಾಹನಗಳಲ್ಲಿ ಸುತ್ತಾಡಿದರು.
ಪೊಲೀಸರು ಹಾಕಿದ ಬ್ಯಾರಿಕೇಡ್‌ಗಳು ಲೆಕ್ಕಕ್ಕೇ ಸಿಗಲಿಲ್ಲ. ಹಲವೆಡೆ ಬ್ಯಾರಿಕೇಡ್‌ಗಳನ್ನು ಕಿತ್ತು ಕೆಳಗೆ ಹಾಕಿದರು. ಹಲವರಿಗೆ ಬ್ಯಾರಿಕೇಡ್ ತಾಗಿ ಗಾಯಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.