ಬೆಂಗಳೂರು: ನಗರದಲ್ಲಿ ದಶಕದ ಅತಿಹೆಚ್ಚು ಮಳೆ 30.79 ಸೆಂ.ಮೀ ಮೇ ತಿಂಗಳಲ್ಲಿ ದಾಖಲಾಗಿದ್ದು, 2023ರ ಮೇ ನಲ್ಲಿ ಸುರಿದ 30.54 ಸೆಂ.ಮೀ ಮಳೆಯ ಪ್ರಮಾಣವನ್ನು ಮೀರಿದೆ.
ಮೇ 26ರವರೆಗೆ 30.79 ಸೆಂ.ಮೀ ಮಳೆಯಾಗಿದ್ದು, ತಿಂಗಳ ಅಂತ್ಯಕ್ಕೆ ಈ ಪ್ರಮಾಣ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ.
ನಗರದಲ್ಲಿ ಪೂರ್ವ ಮುಂಗಾರಿನಲ್ಲಿ ಮಾರ್ಚ್ 1ರಿಂದ ಮೇ 26ರವರೆಗೆ 34.06 ಸೆಂ.ಮೀ ಮಳೆಯಾಗಿದೆ. ಇದು ವಾಡಿಕೆಗಿಂತ (15.5 ಸೆಂ.ಮೀ) ದುಪ್ಪಟ್ಟಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ ಒಂದು ದಶಕದಲ್ಲಿ ವರ್ಷದ ಮೊದಲ ಐದು ತಿಂಗಳಲ್ಲಿ ಅತಿಹೆಚ್ಚು ಮಳೆ ಸುರಿದ ದಾಖಲೆಯೂ ಈ ವರ್ಷದಲ್ಲೇ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.