ADVERTISEMENT

ನವೀಕೃತ ಇಂಡಿಯಾ ಕಾಫಿ ಹೌಸ್‌ ಉದ್ಘಾಟನೆ

2ನೇ ಹಂತದ ನಗರಗಳಿಗೆ ಫ್ರಾಂಚೈಸಿ ಮಾದರಿ ಪರಿಚಯ

​ಪ್ರಜಾವಾಣಿ ವಾರ್ತೆ
Published 9 ಜನವರಿ 2023, 15:56 IST
Last Updated 9 ಜನವರಿ 2023, 15:56 IST
ನಗರದ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆಯ ಕಾಫಿ ಬೋರ್ಡ್ ಆವರಣದಲ್ಲಿರುವ ನವೀಕರಿಸಿದ ಇಂಡಿಯಾ ಕಾಫಿ ಹೌಸ್ ಅನ್ನು ಸೋಮವಾರ ಉದ್ಘಾಟಿಸಲಾಯಿತು. (ಎಡದಿಂದ ಬಲಕ್ಕೆ) ಕೇಂದ್ರ ಸರ್ಕಾರದ ವಾಣಿಜ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಾಜೇಶ್ ಅಗರವಾಲ್, ಕಾಫಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸಿ. ಜಗದೀಶ ಇದ್ದರು. ಪ್ರಜಾವಾಣಿ ಚಿತ್ರ
ನಗರದ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆಯ ಕಾಫಿ ಬೋರ್ಡ್ ಆವರಣದಲ್ಲಿರುವ ನವೀಕರಿಸಿದ ಇಂಡಿಯಾ ಕಾಫಿ ಹೌಸ್ ಅನ್ನು ಸೋಮವಾರ ಉದ್ಘಾಟಿಸಲಾಯಿತು. (ಎಡದಿಂದ ಬಲಕ್ಕೆ) ಕೇಂದ್ರ ಸರ್ಕಾರದ ವಾಣಿಜ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಾಜೇಶ್ ಅಗರವಾಲ್, ಕಾಫಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸಿ. ಜಗದೀಶ ಇದ್ದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ಡಾ.ಬಿ.ಆರ್. ಅಂಬೇಡ್ಕರ್‌ ರಸ್ತೆಯಲ್ಲಿರುವ ನವೀಕೃತ ಇಂಡಿಯಾ ಕಾಫಿ ಹೌಸ್‌ (ಐಸಿಎಚ್‌) ಅನ್ನು ಕೇಂದ್ರ ಸರ್ಕಾರದ ವಾಣಿಜ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಾಜೇಶ್ ಅಗರವಾಲ್ ಸೋಮವಾರ ಉದ್ಘಾಟನೆಗೊಳಿಸಿದರು.

ನಂತರ ಮಾತನಾಡಿದ ಅವರು, ‘ಆದರ್ಶಪ್ರಾಯವಾಗಿರುವ ಇಂಡಿಯಾ ಕಾಫಿ ಹೌಸ್ ಅನ್ನು ಅದರ ಪಾರಂಪರಿಕ ಸೌಂದರ್ಯ ಸ್ಪರ್ಶವನ್ನು ಉಳಿಸಿಕೊಳ್ಳುವ ರೀತಿಯಲ್ಲಿ ನವೀಕರಿಸಲಾಗಿದ್ದು, ಯುವಜನರನ್ನು ಇದು ಆಕರ್ಷಿಸುವಂತಿದೆ. ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ’ ಎಂದರು.

‘1972ರಲ್ಲಿ ಕಾಫಿ ಮಂಡಳಿಯ ಆವರಣದಲ್ಲಿ ಪ್ರಾರಂಭವಾದ ಐಸಿಎಚ್‌ ವಿಧಾನಸೌಧ, ಹೈಕೋರ್ಟ್‌ ಮತ್ತು ವಿಶ್ವೇಶ್ವರಯ್ಯ ಟವರ್‌ನ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ನೆಚ್ಚಿನ ತಾಣವಾಗಿದೆ. ತನ್ನ ಸುವರ್ಣ ಮಹೋತ್ಸವದ ಅಂಗವಾಗಿ ಇಲ್ಲಿನ ಕಾಫಿ ಹೌಸ್‌ ಅನ್ನು ₹22 ಲಕ್ಷದಲ್ಲಿ ನವೀಕೃತಗೊಳಿಸಲಾಗಿದೆ’ ಎಂದು ಕಾಫಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜಿ. ಜಗದೀಶ ಮಾಹಿತಿ ನೀಡಿದರು.

ADVERTISEMENT

‘ಯುವ ಸಮೂಹವನ್ನು ಕಾಫಿ ಹೌಸ್‌ ಕಡೆ ಸೆಳೆಯಲು ಅಟಲ್ ಇನ್‌ಕ್ಯೂಬೇಷನ್ ಸೆಂಟರ್‌ನ ಅಂಗವಿಕಲರೇ ನಡೆಸುವ ‘ಮಿಟ್ಟಿ ಕೆಫೆ’ಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ನೂತನ ಆಹಾರ ಪದಾರ್ಥಗಳ ಪಟ್ಟಿಯನ್ನು ರೂಪಿಸಿದ್ದು, ಈ ಸಂಸ್ಥೆ ಕಾಫಿಯ ವಿಶೇಷ ವಿಭಾಗವನ್ನು ಪರಿಚಯಿಸಲಿದೆ. ಇದರಿಂದ ನಮ್ಮ ಮೆನುವಿನಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಿಕೊಂಡಿಲ್ಲ. ಆದರೆ ಯುವ ಸಮೂಹಕ್ಕೆ ಇಷ್ಟವಾಗುವ ರೀತಿಯಲ್ಲಿ ಈ ಕಾಫಿ ಹೌಸ್‌ ಅನ್ನು ವಿನ್ಯಾಸಗೊಳಿಸಲಾಗಿದೆ’ ಎಂದು ತಿಳಿಸಿದರು.

‘ಸ್ವಂತ ಕಾಫಿ ಶಾಪ್ ತೆರೆಯಲು ಇಚ್ಛಿಸುವ ಹಾಗೂ ಪಿಯುಸಿ ಅಥವಾ ತತ್ಸಮಾನ ತರಗತಿ ಪೂರ್ಣಗೊಳಿಸಿರುವ ಯುವಜನರಿಗೆ ವೃತ್ತಿಪರ ಬ್ಯಾರಿಸ್ಟ್‌ ಎಂಬ ಕೋರ್ಸ್‌ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. 2ನೇ ಹಂತದ ನಗರಗಳಿಗೆ ಫ್ರಾಂಚೈಸಿ ಮಾದರಿಯನ್ನು ಪರಿಚಯಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.