
ಬೆಂಗಳೂರು: ನಗರದ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಮೈದಾನದಲ್ಲಿ ಸೋಮವಾರ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಸೇರಿ ಗಣ್ಯರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿದ್ದವಾಗುವ ಲಘು ಉಪಾಹಾರ ನೀಡಲಾಗುತ್ತದೆ.
ನವ ಸಂಕಲ್ಪ ಕಾರ್ಯಕ್ರಮದ ಅಡಿಯಲ್ಲಿ ಕೈದಿಗಳೇ ಜೈಲಿನ ಬೇಕರಿಯಲ್ಲಿ ಸಿದ್ದಪಡಿಸುವ ತಿನಿಸುಗಳನ್ನು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಗಣ್ಯರು ಹಾಗೂ ಪತ್ರಕರ್ತರಿಗೂ ನೀಡಲಾಗುತ್ತದೆ. ಅದಕ್ಕಾಗಿಯೇ ಜೈಲಿನ ಬೇಕರಿಯಲ್ಲಿ ಬಿಸ್ಕೆಟ್, ಬ್ರೇಡ್, ಡ್ರೈ ಫ್ರೂಟ್ಸ್ ಸೇರಿ ಕೆಲ ವಿಶೇಷ ತಿಂಡಿಗಳನ್ನು ಸಿದ್ದಪಡಿಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದರು.
‘ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗಣ್ಯರು ಹಾಗೂ ಪತ್ರಕರ್ತರಿಗೆ ಜೈಲಿನ ಬೇಕರಿಯಲ್ಲೇ ಸಿದ್ದಪಡಿಸಿದ ಬೇಕರಿ ತಿನಿಸುಗಳನ್ನು ವಿತರಿಸಲಾಗುತ್ತದೆ. ಹೈದರಾಬಾದ್‌ನ ಆಹಾರ ತಜ್ಞರು ಹತ್ತು ದಿನ ಕೈದಿಗಳಿಗೆ ತರಬೇತಿ ನೀಡಿದ್ದಾರೆ. ಆಹಾರ ತಜ್ಞರ ಸಮ್ಮುಖದಲ್ಲಿ ಕೈದಿಗಳೇ ಬೇಕರಿ ತಿನಿಸುಗಳನ್ನು ಸಿದ್ದಪಡಿಸಿದ್ದಾರೆ. ಒಟ್ಟು 700 ಆಹಾರದ ಪ್ಯಾಕೆಟ್ ಸಿದ್ದವಾಗಿದೆ’ ಎಂದು ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.