ADVERTISEMENT

ರಂಗೋಲಿಯಲ್ಲಿ ಅರಳಿದ 2ಸಾವಿರ ಅಡಿ ಉದ್ದದ ತ್ರಿವರ್ಣ ಧ್ವಜ

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 19:45 IST
Last Updated 26 ಜನವರಿ 2020, 19:45 IST
ರಂಗೋಲಿ
ರಂಗೋಲಿ   

ಜಯನಗರದ ಕಿತ್ತೂರು ರಾಣಿ ಚನ್ನಮ್ಮ ಆಟದ ಮೈದಾನದಲ್ಲಿ ರಂಗೋಲಿಯಲ್ಲಿ ಬಿಡಿಸಿದ ಎರಡು ಸಾವಿರ ಅಡಿ ವಿಸ್ತಾರದ ಬೃಹತ್ ತ್ರಿವರ್ಣ ಧ್ವಜ ಭಾನುವಾರ ನಡೆದ ಗಣರಾಜ್ಯೋತ್ಸವಕ್ಕೆ ಮೆರುಗು ತಂದಿತು.

ಇಡೀ ಆಟದ ಮೈದಾನವನ್ನು ಆವರಿಸಿಕೊಂಡಿದ್ದ ತ್ರಿವರ್ಣ ಧ್ವಜ, ಬಾಂಧವ ಸಂಸ್ಥೆಯ 40ಕ್ಕೂ ಹೆಚ್ಚು ಮಹಿಳೆಯರು ಮತ್ತು ಶಾಲಾ ಮಕ್ಕಳ ಶ್ರಮದಿಂದ ಅರಳಿದೆ. ಸುಮಾರು 300 ಕೆ.ಜಿ. ರಂಗೋಲಿ ಪುಡಿಯನ್ನು ಇದಕ್ಕೆ ಬಳಸಲಾಗಿದೆ.

ಬಿಬಿಎಂಪಿ ಸದಸ್ಯ ಮತ್ತು ಬಾಂಧವ ಸಂಸ್ಥೆಯ ಮುಖ್ಯಸ್ಥ ಎನ್ ನಾಗರಾಜ್ ನೇತೃತ್ವದಲ್ಲಿ ಸತತ ಐದನೇ ವರ್ಷ ಬೃಹತ್‌ ತ್ರಿವರ್ಣ ಧ್ವಜದ ರಂಗೋಲಿ ಬಿಡಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.