ADVERTISEMENT

ಬೆಂಗಳೂರು: ರೈಲ್ವೆ ಕ್ರಾಸ್‌ ದಾಟಲು ಸವಾರರಿಗೆ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 1:59 IST
Last Updated 5 ಅಕ್ಟೋಬರ್ 2025, 1:59 IST
ಮೇದರಹಳ್ಳಿ ರೈಲ್ವೆ ಹಳಿ ಕ್ರಾಸ್ ಮಾಡಲು ವಾಹನ ಸವಾರರಿಗೆ ದಿನನಿತ್ಯ ಕಿರಿಕಿರಿ
ಮೇದರಹಳ್ಳಿ ರೈಲ್ವೆ ಹಳಿ ಕ್ರಾಸ್ ಮಾಡಲು ವಾಹನ ಸವಾರರಿಗೆ ದಿನನಿತ್ಯ ಕಿರಿಕಿರಿ   

ಪೀಣ್ಯ ದಾಸರಹಳ್ಳಿ: ನಿತ್ಯ ಸಾವಿರಾರು ಜನ ಸಂಚರಿಸುವ ಮೇದರಹಳ್ಳಿ ರೈಲ್ವೆ ಕ್ರಾಸ್‌ ಬಳಿ ಅಂಡರ್‌ಪಾಸ್ ಕಾಮಗಾರಿ ಮುಗಿದಿಲ್ಲ. ರೈಲು ಬಂದಾಗ ಕೆಲ ಹೊತ್ತು ಕಾಯ್ದು ನಂತರ ಹೋಗುವ ‍ಸಮಸ್ಯೆಗೆ ಪರಿಹಾರ ಸಿಗದೇ ಜನ ಹೈರಾಣಾಗುತ್ತಿದ್ದಾರೆ.

ಶೆಟ್ಟಿಹಳ್ಳಿ ಕಡೆಯಿಂದ ಮೇದರಹಳ್ಳಿ, ಚಿಕ್ಕಬಾಣಾವರ, ಹೆಸರಘಟ್ಟ, ಅಬ್ಬಿಗೆರೆ, ಲಕ್ಷ್ಮಿಪುರ, ಎಂ.ಎಸ್. ಪಾಳ್ಯ, ಯಲಹಂಕ ಮುಂತಾದ ಕಡೆಗೆ ಹಾಗೂ ಮೇದರಹಳ್ಳಿ ಕಡೆಯಿಂದ ಶೆಟ್ಟಿಹಳ್ಳಿ, ದಾಸರಹಳ್ಳಿ,ನೆಲಮಂಗಲ, ಪೀಣ್ಯ, ಜಾಲಹಳ್ಳಿ ಕ್ರಾಸ್, ಸುಂಕದಕಟ್ಟೆ ಕಡೆಗೆ ಹೋಗುವ ವಾಹನ ಸವಾರರು ಈ ರಸ್ತೆ ಅವಲಂಬಿಸಿದ್ದಾರೆ.

ಒಂದು ಅಂದಾಜಿನ ಪ್ರಕಾರ ದಿನದಲ್ಲಿ 120ಕ್ಕೂ ಹೆಚ್ಚು ರೈಲುಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಈ ವೇಳೆ ರೈಲ್ವೆ ಗೇಟ್ ಮುಚ್ಚಲಾಗುತ್ತದೆ. ಈ ವೇಳೆ ವಾಹನ ಸವಾರರು, ಕೆಲಸಗಳಿಗೆ ಹೋಗುವವರು ಪ್ರತಿನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ.

ADVERTISEMENT

ರೈಲು ಬರುವ 5 ನಿಮಿಷ ಮುಂಚಿತವಾಗಿ ಗೇಟ್ ಹಾಕಲಾಗುತ್ತದೆ. ವಾಹನ ಸವಾರರು ಕಿಲೋ ಮೀಟರ್ ಗಟ್ಟಲೆ ಕಾಯುತ್ತಾ ಟ್ರಾಫಿಕ್ ಜಾಮ್‌ಗೆ ಕಾರಣವಾಗುತ್ತಿದೆ. ಒಂದು ಬಾರಿ ಗೇಟ್‌ ಹಾಕಿದರೆ ನಂತರ ತೆಗೆದಾಗ ಒಮ್ಮೆಲೆ ವಾಹನಗಳ ದಟ್ಟಣೆಯಿಂದ ಶಬ್ದ ಮತ್ತು ವಾಯು ಮಾಲಿನ್ಯದ ಕಿರಿಕಿರಿ ಹೆಚ್ಚಾಗುತ್ತದೆ. ತುರ್ತು ಕೆಲಸಗಳಿಗೆ ತೆರಳುವವರು ಮತ್ತಷ್ಟು ಸಮಸ್ಯೆಗೆ ಒಳಗಾಗಬೇಕಿದೆ.

'ರೈಲ್ವೆ ಅಂಡರ್ ಪಾಸ್ ನಿರ್ಮಾಣಕ್ಕೆ ಚಾಲನೆ ನೀಡಿ ಎಂಟು ವರ್ಷಗಳಾಗಿದ್ದರೂ ಕಾಮಗಾರಿ ಪೂರ್ಣಗೊಳ್ಳದೆ ಇರುವುದು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸಮಸ್ಯೆಗಳಿಗೆ ಕಾರಣವಾಗಿದೆ. ರೈಲ್ವೆ ಇಲಾಖೆಯವರು ಕೂಡಲೇ ಕ್ರಮವಹಿಸಲಿ' ಎಂದು ವಾಹನ ಸವಾರ ರಾಜೇಂದ್ರ ಆಗ್ರಹಿಸಿದರು.

'ವಾಹನ ಸವಾರರ ಅನುಕೂಲಕ್ಕಾಗಿ ಶಾಸಕರ ಮುನಿರಾಜು ಅವರು ರೈಲ್ವೆ ಅಧಿಕಾರಿಗಳನ್ನು ಕರೆಸಿ ಅಂಡರ್ ಪಾಸ್ ಕಾಮಗಾರಿ ಮುಗಿಸಲು ಸೂಚಿಸಿದ್ದರೂ ಕೂಡ ಇನ್ನೂ ಆಗಿಲ್ಲ. ಬೇಗನೇ ಕೆಲಸ ಮುಗಿಸಲು ಒತ್ತಡ ಹೇರುತ್ತೇವೆ' ಎಂದು ಶ್ರೀ ಸಾಯಿ ಫೌಂಡೇಷನ್ ಅಧ್ಯಕ್ಷ ಬಿ. ಸುರೇಶ್ ತಿಳಿಸಿದರು.

ಮೇದರಹಳ್ಳಿ ರೈಲ್ವೆ ಹಳಿ ಕ್ರಾಸ್ ಮಾಡಲು ವಾಹನ ಸವಾರರಿಗೆ ದಿನನಿತ್ಯ ಕಿರಿಕಿರಿ
ಮೇದರಹಳ್ಳಿ ರೈಲ್ವೆ ಹಳಿ ಕ್ರಾಸ್ ಮಾಡಲು ವಾಹನ ಸವಾರರಿಗೆ ದಿನನಿತ್ಯ ಕಿರಿಕಿರಿ
ಅರ್ಧಕ್ಕೆ ನಿಂತ ಅಂಡರ್ ಪಾಸ್ ನಲ್ಲಿ ಕೊಳಚೆ ನೀರು ತುಂಬಿರುವುದು
ಶಾಸಕ ಎಸ್. ಮುನಿರಾಜು
ಶ್ರೀ ಸಾಯಿ ಫೌಂಡೇಶನ್ ಅಧ್ಯಕ್ಷ ಹಾಗೂ ಶೆಟ್ಟಿಹಳ್ಳಿ ನಿವಾಸಿ ಬಿ. ಸುರೇಶ್

ಮುಖ್ಯಾಂಶಗಳು

* ಅಂಡರ್ ಪಾಸ್ ತ್ವರಿತ ಕಾಮಗಾರಿಗೆ ಬೇಡಿಕೆ

* ದಿನನಿತ್ಯ ಟ್ರಾಫಿಕ್ ಕಿರಿಕಿರಿ

* ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ

* ಮಳೆ, ಸುಡು ಬಿಸಿಲಿನಲ್ಲಿ ಕಾಯಬೇಕಾದ ಸನ್ನಿವೇಶ

ಸಬ್ ಅರ್ಬನ್ ರೈಲು ಕಾಮಗಾರಿ ನಡೆಯುತ್ತಿರುವುದರಿಂದ ಅಂಡರ್ ಪಾಸ್ ವಿಸ್ತರಿಸಬೇಕು. ಶೀಘ್ರ ರೈಲ್ವೆ ಸಚಿವರ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇವೆ.
ಎಸ್. ಮುನಿರಾಜುಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.