ADVERTISEMENT

ನಂದಿ ಬೆಟ್ಟಕ್ಕೆ ರೋಪ್‌ ವೇ: ಕಾಯ್ದೆಗೆ ತಿದ್ದುಪಡಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 15:54 IST
Last Updated 25 ಜುಲೈ 2024, 15:54 IST
ನಂದಿ ಬೆಟ್ಟ
ನಂದಿ ಬೆಟ್ಟ   

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ನಂದಿ ಬೆಟ್ಟಕ್ಕೆ ರೋಪ್‌ ವೇ ನಿರ್ಮಾಣ, ಬೆಟ್ಟದ ವ್ಯಾಪ್ತಿಯ ಎರಡು ಎಕರೆ ಪ್ರದೇಶವನ್ನು ಅಭಿವೃದ್ಧಿ ಉದ್ದೇಶಕ್ಕೆ ಬಳಸಲು ಸರ್ಕಾರ ಮುಂದಾಗಿದೆ.

ಈ ಉದ್ದೇಶಕ್ಕಾಗಿ ‘ಕರ್ನಾಟಕ ಸರ್ಕಾರಿ ಉದ್ಯಾನಗಳ (ಸಂರಕ್ಷಣೆ) ತಿದ್ದುಪಡಿ ಮಸೂದೆ– 2024’ ಅನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಗುರುವಾರ ಮಂಡಿಸಿದ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ಸದನಗಳ ಅನುಮೋದನೆ ಪಡೆದುಕೊಂಡರು.

30 ವರ್ಷಗಳ ಅವಧಿಗಾಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ನಂದಿ ಬೆಟ್ಟದಲ್ಲಿ ರೋಪ್‌ ವೇ ನಿರ್ಮಿಸಲು ಮೇಲು ಮಾರ್ಗಾಂತ್ಯ ಸ್ಥಳದಲ್ಲಿ ಅಭಿವೃದ್ಧಿಯ ಉದ್ದೇಶಕ್ಕಾಗಿ ಎರಡು ಎಕರೆಯನ್ನು ಬಳಸಿಕೊಳ್ಳಲು ಅನುವಾಗುವಂತೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.

ADVERTISEMENT

ಉತ್ತರದಲ್ಲಿ ವಾಹನ ನಿಲುಗಡೆ ಇರುವ, ದಕ್ಷಿಣದಲ್ಲಿ ಅರ್ಕಾವತಿ ನದಿಯ ಉಗಮ ಸ್ಥಳದಲ್ಲಿರುವ ಬೆಟ್ಟದ ಇಳಿಜಾರು, ಪೂರ್ವದಲ್ಲಿ ಎರಡನೇ ಕೋಟೆ ಗೋಡೆ, ಪಶ್ಚಿಮದಲ್ಲಿ ಮೊದಲನೇ ಕೋಟೆ ಗೋಡೆಯ ಚಕ್ಕುಬಂದಿ ಹೊಂದಿರುವ ನಂದಿ ಬೆಟ್ಟದ ಸರ್ವೆ ನಂ.3ರಲ್ಲಿನ ಎರಡು ಎಕರೆ ಪ್ರದೇಶವನ್ನು ‘ಮಾರ್ಗಾಂತ್ಯ ಸ್ಥಳ’ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಮಸೂದೆ ಅವಕಾಶ ಕಲ್ಪಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.