ಬೆಂಗಳೂರು: ಹೆಬ್ಬಾಳದಿಂದ ನಾಗವಾರದ ಕಡೆಗೆ ಸಾಗುವ ಹೊರವರ್ತುಲ ರಸ್ತೆಯಲ್ಲಿ ಬರುವ ವೀರಣ್ಣ ಪಾಳ್ಯ ಮೇಲ್ಸೇತುವೆ ಬಳಿ ಪಾಲಿಕೆ ವೈಟ್‌ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡಿದೆ.
ಕಾಮಗಾರಿ ನಡೆಯುವುದರಿಂದ ಡಿ.22ರಿಂದ ಜನವರಿ 10ರವರೆಗೆ ಈಭಾಗದಲ್ಲಿ ಮಾರ್ಗ ಪಲ್ಲಟ ಮಾಡಲಾಗಿದ್ದು, ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ವಾಹನಗಳು ಸರ್ವೀಸ್ ರಸ್ತೆಗಳ ಮೂಲಕ ಸಂಚರಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.