ADVERTISEMENT

ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರತಿನಿಧಿ ಮಹಾಸಭಾ ಆರಂಭ 

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 4:25 IST
Last Updated 19 ಮಾರ್ಚ್ 2021, 4:25 IST
ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ಚನ್ನೇನಹಳ್ಳಿಯಲ್ಲಿ ಶುಕ್ರವಾರ ಬೆಳಿಗ್ಗೆ ಆರಂಭಗೊಂಡಿತು.
ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ಚನ್ನೇನಹಳ್ಳಿಯಲ್ಲಿ ಶುಕ್ರವಾರ ಬೆಳಿಗ್ಗೆ ಆರಂಭಗೊಂಡಿತು.   

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ನೀತಿ ನಿರೂಪಣೆ ಹಾಗೂ ನಿರ್ಣಯ ತೆಗೆದುಕೊಳ್ಳುವ ಎರಡು ದಿನಗಳಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ಚನ್ನೇನಹಳ್ಳಿಯಲ್ಲಿ ಶುಕ್ರವಾರ ಬೆಳಿಗ್ಗೆ ಆರಂಭಗೊಂಡಿತು.

ಸರ ಸಂಘಚಾಲಕ್ ಮೋಹನ್ ಭಾಗವತ್, ಸರಕಾರ್ಯವಾಹ ಸುರೇಶ್ ( ಭೈಯಾಜೀ) ಜೋಶಿ ಅವರು ಎಬಿಪಿಎಸ್ ಉದ್ಘಾಟಿಸಿದರು.

ಸಹ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ, ಸಿ.ಆರ್. ಮುಕುಂದ, ಸುರೇಶ್ ಸೋನಿ, ಕೃಷ್ಣಗೋಪಾಲ್, ಭಾಗಯ್ಯ ಸೇರಿದಂತೆ ಬಿಜೆಪಿ, ವಿಶ್ವಹಿಂದು ಪರಿಷತ್, ಎಬಿವಿಪಿ, ವಿದ್ಯಾಭಾರತಿ, ಸೇವಾ ಭಾರತಿ ಮತ್ತಿತರಸಂಘಪರಿವಾರದ ಸಂಘಟನೆಗಳ ಸುಮಾರು 450 ಪ್ರತಿನಿಧಿಗಳು ಸಭಾದಲ್ಲಿ ಭಾಗವಹಿಸಿದ್ದಾರೆ. ಶನಿವಾರವೂ ಎಬಿಪಿಎಸ್ ನಡೆಯಲಿದೆ.

ADVERTISEMENT

ಸಂಘ ಶಾಖೆಯ ವಿಸ್ತಾರ ಸೇರಿದಂತೆ ವಿವಿಧ ಚಟುವಟಿಕೆಯ ವರದಿ, ಮುಂದಿನ ಕಾರ್ಯಯೋಜನೆ ಹಾಗೂ ರಾಷ್ಟ್ರೀಯ ಮಹತ್ವದ ಪ್ರಮುಖ ವಿಷಯದ ಚರ್ಚೆ ಎಬಿಪಿಎಸ್‌ನಲ್ಲಿ ನಡೆಯಲಿದೆ.

ಹೊಸ ಸರಕಾರ್ಯವಾಹ ಆಯ್ಕೆಯ ಚುನಾವಣೆ ಶನಿವಾರ ನಡೆಯಲಿದೆ. ಕೋವಿಡ್ ಕಾರಣ ಎಲ್ಲ ಸುರಕ್ಷತ ಕ್ರಮಗಳನ್ನು ತೆಗೆದುಕೊಂಡಿದ್ದು, ನೇರವಾಗಿ ಪಾಲ್ಗೊಳ್ಳಲು ಸಾಧ್ಯವಾಗದವರಿಗೆ ವರ್ಚುವಲ್ ವ್ಯವಸ್ಥೆ ಮೂಲಕ ಭಾಗವಹಿಸಲು ಅನುಕೂಲ ಆಗುವಂತೆ ದೇಶದ 44 ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.