ADVERTISEMENT

ಪರವಾನಗಿ ಇಲ್ಲದ 4 ಬಸ್‌ ವಶ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 19:57 IST
Last Updated 5 ಅಕ್ಟೋಬರ್ 2020, 19:57 IST
ವಶಪಡಿಸಿಕೊಂಡಿರುವ ವಾಹನಗಳ ಜತೆ ಯಲಹಂಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಾಶ್‌, ಮೋಟಾರ್‌ ವಾಹನ ಹಿರಿಯ ನಿರೀಕ್ಷಕ  ರಾಜ್‌ಕುಮಾರ್‌, ನಿರೀಕ್ಷಕಿ ಲಕ್ಷ್ಮಿ ಹಾಗೂ ಇತರ ಸಿಬ್ಬಂದಿ
ವಶಪಡಿಸಿಕೊಂಡಿರುವ ವಾಹನಗಳ ಜತೆ ಯಲಹಂಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಾಶ್‌, ಮೋಟಾರ್‌ ವಾಹನ ಹಿರಿಯ ನಿರೀಕ್ಷಕ  ರಾಜ್‌ಕುಮಾರ್‌, ನಿರೀಕ್ಷಕಿ ಲಕ್ಷ್ಮಿ ಹಾಗೂ ಇತರ ಸಿಬ್ಬಂದಿ   

ಬೆಂಗಳೂರು: ಪರವಾನಗಿ ಇಲ್ಲದೆ ರಾಜ್ಯದಲ್ಲಿ ಸಂಚರಿಸುತ್ತಿರುವ ಬಸ್‌ಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಸಾರಿಗೆ ಇಲಾಖೆ ಅಧಿಕಾರಿಗಳು, ನಾಲ್ಕು ಬಸ್‌ಗಳನ್ನು ಸೋಮವಾರ ವಶಕ್ಕೆ ಪಡೆದಿದ್ದಾರೆ.

‘ಯಲಹಂಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಾಶ್‌ ನೇತೃತ್ವದಲ್ಲಿ ಬಳ್ಳಾರಿ ರಸ್ತೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.ನಾಗಾಲ್ಯಾಂಡ್‌ ಹಾಗೂ ಅರುಣಾಚಲ‌ ಪ್ರದೇಶದ ಪರವಾನಗಿ ಹೊಂದಿರುವ ಬಸ್‌ಗಳು ರಾಜ್ಯದಲ್ಲಿ ಸಂಚರಿಸುತ್ತಿರುವುದು ಪತ್ತೆ ಆಯಿತು’ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

’ರಾಜ್ಯಕ್ಕೆ ತೆರಿಗೆ ಪಾವತಿಸಿ ಪರವಾನಗಿ ಪಡೆಯದೆ ವಂಚಿಸುತ್ತಿರುವ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆಸಲಾಯಿತು. ಬಸ್‌ಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ದಾಖಲೆಗಳನ್ನು ನೀಡಿದ ನಂತರ ನಿಗದಿತ ದಂಡ ವಿಧಿಸಲಾಗುವುದು’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.