ADVERTISEMENT

ಆನ್‌ಲೈನ್‌ ತರಗತಿ ನಿರಾತಂಕ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 20:09 IST
Last Updated 21 ಡಿಸೆಂಬರ್ 2020, 20:09 IST

ಬೆಂಗಳೂರು: ಮಾನ್ಯತೆ ಪಡೆದ ಅನುದಾನರಹಿತ ಶಾಲೆಗಳ ಸಂಘವು (ರುಪ್ಸ) ನೀಡಿದ್ದ ಆನ್‌ಲೈನ್‌ ತರಗತಿ ಸ್ಥಗಿತ ಕರೆಗೆ ಬಹುತೇಕ ಶಾಲೆಗಳು ಬೆಂಬಲ ವ್ಯಕ್ತಪಡಿಸಲಿಲ್ಲ. ಆನ್‌ಲೈನ್‌ ತರಗತಿಗಳು ಸೋಮವಾರ ಎಂದಿನಂತೆ ನಡೆದವು.

ವಿವಿಧ ಬೇಡಿಕೆ ಈಡೇರಿಕೆಗಾಗಿ ಸರ್ಕಾರ ಸ್ಪಂದಿಸುವವರೆಗೆ ಸೋಮವಾರದಿಂದ ಆನ್‌ಲೈನ್‌ ತರಗತಿಗಳನ್ನು ಸ್ಥಗಿತಗೊಳಿಸುವುದಾಗಿ ರುಪ್ಸ ಹೇಳಿತ್ತು. ಅನುದಾನರಹಿತ ಶಾಲೆಗಳಿಗೆ ಹಣಕಾಸು ನೆರವು ನೀಡುವುದು, ಬ್ಯಾಂಕ್‌ ಸಾಲ ಕಟ್ಟುವ ಕಂತಿನ ಅವಧಿಯನ್ನು ಒಂದು ವರ್ಷದವರೆಗೆ ವಿಸ್ತರಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ರುಪ್ಸ ಸರ್ಕಾರದ ಮುಂದಿಟ್ಟಿತ್ತು.

ಕರ್ನಾಟಕ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್‌), ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿ (ಕುಸ್ಮ) ಮತ್ತು ಸಿಬಿಎಸ್‌ಇ ಶಾಲೆಗಳ ಸಂಘಗಳು ಹಾಗೂ ಪೋಷಕರ ಸಂಘಗಳು ರುಪ್ಸದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಈ ಸಂಘಗಳ ಸದಸ್ಯ ಶಾಲೆಗಳಲ್ಲಿ ಆನ್‌ಲೈನ್‌ ತರಗತಿ ಸರಾಗವಾಗಿ ನಡೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.