ADVERTISEMENT

ಗ್ರಾಮೀಣ ಕ್ವಿಜ್‌: ಕೇರಳ ಚಾಂಪಿಯನ್‌

ವಿಜೇತ ಶ್ರೀನಂದ್‌ಗೆ ₹1 ಲಕ್ಷ ಮೌಲ್ಯದ ವಿದ್ಯಾರ್ಥಿವೇತನ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 15:56 IST
Last Updated 18 ನವೆಂಬರ್ 2022, 15:56 IST

ಬೆಂಗಳೂರು: ಸಾಧಿಸುವ ಛಲ ಕೊನೆಯವರೆಗೂ ಇರಬೇಕು.. ಛಲವಿದ್ದರೆ ಕೊನೆಯ ಕ್ಷಣದಲ್ಲೂ ಗೆಲುವುಸಾಧ್ಯ... ಈ ಮಾತು ಗ್ರಾಮೀಣ ಐಟಿ ಕ್ವಿಜ್‌ನಲ್ಲಿಅನುರಣಿಸಿತು. ಎಲ್ಲ ಕ್ವಿಜ್‌ ಮಾಸ್ಟರ್‌, ಮುಖ್ಯ ಅತಿಥಿಗಳೆಲ್ಲ ಹೇಳಿದ್ದೂ ಈ ಮಾತನ್ನೇ...

ಕೇರಳದ ಶ್ರೀನಂದ್‌ ಸುದೇಶ್‌ ಅವರು ಕೊನೆಯ ಕ್ಷಣದಲ್ಲಿ ನೀಡಿದ ಉತ್ತರವು ಅವರನ್ನು ರಾಷ್ಟ್ರೀಯ ಚಾಂಪಿಯನ್‌ನನ್ನಾಗಿ ಮಾಡಿತು.ಬೆಂಗಳೂರುಟೆಕ್‌ ಸಮಿಟ್‌ನಲ್ಲಿ ‘ಟಿಸಿಎಸ್‌ ಗ್ರಾಮೀಣ ಐಟಿ ಕ್ವಿಜ್‌’ನಲ್ಲಿ ಈ ಸಾಧನೆ ಮಾಡಿದ ಶ್ರೀನಂದ್‌ ಎಲ್ಲರ ಪ್ರಶಂಸೆಗೆ ಪಾತ್ರರಾದರು.

ಶುಕ್ರವಾರ ನಡೆದ ಫೈನಲ್‌ನಲ್ಲಿರಾಜಸ್ಥಾನ, ಕೇರಳ, ಉತ್ತರ ಪ್ರದೇಶ, ಆಂಧ್ರ ಪ್ರದೇಶ,ಮಧ್ಯ ಪ್ರದೇಶ, ಛತ್ತೀಸ್‌ಗಢ, ಗುಜರಾತ್‌ ಹಾಗೂ ಗೋವಾದಿಂದ ಒಬ್ಬೊಬ್ಬ ವಿದ್ಯಾರ್ಥಿ ಭಾಗವಹಿಸಿದ್ದರು.ನಾಲ್ಕು ಪ್ರಾಥಮಿಕ ಹಾಗೂ ಅಂತಿಮ ಸುತ್ತುಸೇರಿದಂತೆಐದು ಸುತ್ತುಗಳಲ್ಲಿ ಕ್ವಿಜ್‌ ನಡೆಯಿತು.

ADVERTISEMENT

ತಪ್ಪು ಉತ್ತರಗಳಿಂದ ಅಂಕ ಕಳೆದುಕೊಂಡು ನಾಲ್ಕನೇ ಸುತ್ತು ಮುಗಿದ ಮೇಲೆ ಅಂಕಪಟ್ಟಿಯಲ್ಲಿ ಸೊನ್ನೆ ಅಂಕ ಪಡೆದು ಕೊನೆಯ ಸ್ಥಾನದಲ್ಲಿದ್ದ ಕೇರಳಮಲ್ಲಪುರಂಸರ್ಕಾರಿ ಮಾದರಿ ಪ್ರೌಢಶಾಲೆಯ ಶ್ರೀನಂದ್‌, ಅಂತಿಮ ಸುತ್ತಿನಲ್ಲಿ ತಲಾ 75 ಅಂಕಗಳ ಎರಡು ಪ್ರಶ್ನೆಗೆ ಸರಿ ಉತ್ತರ ನೀಡಿದರು. ಕೊನೆ ಪ್ರಶ್ನೆಗೆ ಉತ್ತರ ನೀಡುವ ಮುನ್ನ ನಡುಗುತ್ತಿದ್ದ ಅವರು, ಒಂದೆರಡು ಕ್ಷಣ ಸುಧಾರಿಸಿಕೊಂಡು ನೀಡಿದ ಉತ್ತರ ಅವರಿಗೆ ಚಾಂಪಿಯನ್‌ ಪಟ್ಟತಂದುಕೊಟ್ಟಿತು. ಮೂರು ಪ್ರಶ್ನೆಗಳಿಗೆ ಸರಿ ಉತ್ತರ ನೀಡಿ, 225 ಅಂಕ ಪಡೆದುವಿಜಯಿಯಾದರು.

ಕ್ವಿಜ್‌ ಮಾಸ್ಟರ್‌ ಗಿರಿಬಾಲಸುಬ್ರಹ್ಮಣ್ಯ, ಮಾಹಿತಿ ತಂತ್ರಜ್ಞಾನ ಸಚಿವಡಾ. ಅಶ್ವತ್ಥ ನಾರಾಯಣ, ಮುಖ್ಯ ಅತಿಥಿ ಎಚ್ಎಎಲ್‌ಸಿಇಒಮಿಹಿರ್‌ ಕಂಠಿಮಿಶ್ರಾಅವರು ‘ಛಲವಿದ್ದರೆ ಕೊನೆಯ ಕ್ಷಣದಲ್ಲೂ ಜಯ ಸಾಧ್ಯ’ ಎಂದು ಈ ಸಾಧನೆಯನ್ನು ಪ್ರಶಂಸಿಸಿದರು. ಕಿಕ್ಕಿರಿದು ತುಂಬಿದ್ದಸಭಾಂಗಣದಲ್ಲಿಒಂದೆರಡು ನಿಮಿಷ ಚಪ್ಪಾಳೆನಿಂತಿರಲಿಲ್ಲ.

ಶ್ರೀನಂದ್‌ ಅವರಿಗೆ ₹1 ಲಕ್ಷ ಮೌಲ್ಯದ ವಿದ್ಯಾರ್ಥಿವೇತನ ಹಾಗೂಟ್ರೋಫಿನೀಡಲಾಯಿತು. ಎರಡನೇ ಸ್ಥಾನ ಪಡೆದ ರಾಜಸ್ಥಾನದ ಸೂರತ್‌ಗರ್‌ ಸ್ವಾಮಿವಿವೇಕಾನಂದಮಾದರಿ ಶಾಲೆಯ ವಿವೇಕ್‌ (ಒಟ್ಟು 200 ಅಂಕ) ಅವರಿಗೆ ₹50 ಸಾವಿರ ಮೌಲ್ಯದ ವಿದ್ಯಾರ್ಥಿವೇತನ, ಸ್ಮರಣಿಕೆ, ಉಳಿದ ಆರು ವಿದ್ಯಾರ್ಥಿಗಳಿಗೆ ₹10 ಸಾವಿರದ ವಿದ್ಯಾರ್ಥಿವೇತನ, ಸ್ಮರಣಿಕೆ ವಿತರಿಸಲಾಯಿತು.

ಮೊದಲ ಬಾರಿಗೆ ಕರ್ನಾಟಕ ಇಲ್ಲ!

‘ಟಿಸಿಎಸ್‌ ಗ್ರಾಮೀಣ ಕ್ವಿಜ್‌ 2000ರಲ್ಲಿ ಆರಂಭವಾಗಿದ್ದು, ಪ್ರಥಮ ಬಾರಿಗೆ ಕರ್ನಾಟಕದ ವಿದ್ಯಾರ್ಥಿಗಳು ಫೈನಲ್‌ನಲ್ಲಿ ಇರಲಿಲ್ಲ. 22 ಆವೃತ್ತಿಯಲ್ಲೂ ಕರ್ನಾಟಕದವಿದ್ಯಾರ್ಥಿಗಳಿದ್ದಾಗಇಲ್ಲಿ ಕ್ವಿಜ್‌ ನಡೆಸುವಾಗಚಪ್ಪಾಳೆಸೀಮಿತವಾಗಿರುತ್ತಿತ್ತು. ಮೊದಲ ಬಾರಿಗೆ ಕರ್ನಾಟಕದ ವಿದ್ಯಾರ್ಥಿಗಳು ಇಲ್ಲದ್ದರಿಂದ ಫೈನಲ್‌ನಲ್ಲಿ ಎಲ್ಲರಿಗೂ ಸಮನಾಗಿ ಚಪ್ಪಾಳೆ ಬರುತ್ತದೆ ಎಂದೇ ಭಾವಿಸುತ್ತೇನೆ’ ಎಂದು ಕ್ವಿಜ್‌ ಮಾಸ್ಟರ್‌ ಗಿರಿಬಾಲಸುಬ್ರಹ್ಮಣ್ಯತಿಳಿಸಿದರು.

ಈ ಬಾರಿ ದೇಶದ 28 ರಾಜ್ಯಗಳ 4.7 ಲಕ್ಷ ಮಕ್ಕಳು ಕ್ವಿಜ್‌ನಲ್ಲಿ ಭಾಗವಹಿಸಿದ್ದರು. ಒಟ್ಟಾರೆ ಈವರೆಗೆ 23 ಆವೃತ್ತಿಯಲ್ಲಿ ಎರಡು ಕೋಟಿ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದರು.

‘ಈವರೆಗೆ ಫೈನಲ್‌ನಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳನ್ನು ನಾವು ಟ್ರ್ಯಾಕ್‌ ಮಾಡುತ್ತಿದ್ದು, ಅವರಿಗೆ ಟಿಸಿಎಸ್‌ನಲ್ಲೇ ಉದ್ಯೋಗ ನೀಡುತ್ತಿದ್ದೇವೆ. ಇಂತಹ ಪ್ರತಿಭೆಗಳನ್ನು ಬೇರೆಯವರು ಪಡೆದುಕೊಳ್ಳಲು ನಾವು ಬಿಡುವುದಿಲ್ಲ’ ಎಂದು ಟಿಸಿಎಸ್‌ ಪ್ರತಿನಿಧಿ ಹೇಳಿದರು. ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.