ADVERTISEMENT

ಕೆ.ಆರ್‌.ಪುರದಲ್ಲಿ ವನ ಸಿರಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 19:47 IST
Last Updated 12 ಜೂನ್ 2019, 19:47 IST
ಸಾಲುಮರದ ತಿಮ್ಮಕ್ಕ ಅವರನ್ನು ಶಾಲೆಯ ಕಾರ್ಯದರ್ಶಿ ಶ್ರೀವಾತ್ಸವ್ ವಾಜಪೇಯಿ ಸನ್ಮಾನಿಸಿದರು. ಪ್ರಾಂಶುಪಾಲರಾದ ಲೀಲಾವತಿ, ಶ್ರೀನಿವಾಸ್, ರಾಜಣ್ಣ ಇದ್ದರು.
ಸಾಲುಮರದ ತಿಮ್ಮಕ್ಕ ಅವರನ್ನು ಶಾಲೆಯ ಕಾರ್ಯದರ್ಶಿ ಶ್ರೀವಾತ್ಸವ್ ವಾಜಪೇಯಿ ಸನ್ಮಾನಿಸಿದರು. ಪ್ರಾಂಶುಪಾಲರಾದ ಲೀಲಾವತಿ, ಶ್ರೀನಿವಾಸ್, ರಾಜಣ್ಣ ಇದ್ದರು.   

ಬೆಂಗಳೂರು:‌ ಮಕ್ಕಳು ಬಾಲ್ಯದಿಂದಲೇ ಗಿಡ ನೆಡುವ ಸಂಸ್ಕೃತಿಯನ್ನು ಬೆಳೆಸಿಕೊಂಡರೆ ನಮ್ಮ ನಾಡು ಹಸಿರುಮಯವಾಗುತ್ತದೆ ಎಂದು ಸಾಲುಮರದ ತಿಮ್ಮಕ್ಕ ತಿಳಿಸಿದರು.

ಕೆ.ಆರ್.ಪುರ ಸಮೀಪದ ಕೆ.ನಾರಾಯಣಪುರದ ಸಾಧನಾ ವಿದ್ಯಾಕೇಂದ್ರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ವನಸಿರಿ-2019 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಮುಂದಿನ ಪೀಳಿಗೆಗೆ ನೀರು, ನೆರಳು, ಸಮೃದ್ಧ ವಾತಾವರಣ ಸಿಗಲು ಪರಿಸರದ ಉಳಿವು ಅತಿಮುಖ್ಯ. ಶಾಲಾ ವಿದ್ಯಾರ್ಥಿಗಳು ತಮ್ಮ ಮನೆಯ ಅಂಗಳ, ಶಾಲಾ ಆವರಣ, ದೇವಸ್ಥಾನ ಹಾಗೂ ಖಾಲಿ ಜಾಗಗಳಲ್ಲಿ ಸಸಿಗಳನ್ನು ನೆಟ್ಟರೆ ನೆರಳು ಸಿಗುತ್ತದೆ. ಅಲ್ಲದೆ ಪ್ರಾಣಿಪಕ್ಷಿಗಳು ಗೂಡು ಕಟ್ಟಿಕೊಂಡು ಅಶ್ರಯ ಪಡೆಯಲು ನೆರವಾಗುತ್ತದೆ’ ಎಂದರು.

ADVERTISEMENT

ಪ್ರಾಂಶುಪಾಲರಾದ ಲೀಲಾವತಿ ಮಾತನಾಡಿ, ‘ಮಕ್ಕಳ ಪೋಷಕರಿಗೆ 200ಕ್ಕೂ ಹೆಚ್ಚು ಸಸಿಗಳನ್ನು ನೀಡುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.