ADVERTISEMENT

‘ಸದಾನಂದಗೌಡ ಏನು ಮಾಡಿದ್ದಾರೆ’: ಪ್ರಶ್ನಿಸಿದ ಮಹಿಳೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 19:42 IST
Last Updated 2 ಏಪ್ರಿಲ್ 2019, 19:42 IST

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಅವರ ಪರ ಮತ ಕೇಳಲು ಹೋದ ಕಾರ್ಯಕರ್ತರನ್ನು ಮಹಿಳೆಯೊಬ್ಬರು ತರಾಟೆಗೆ ತೆಗೆದುಕೊಂಡಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳವಾರ ವೈರಲ್ ಆಗಿದೆ.

‘ಸದಾನಂದಗೌಡ ಅವರಿಗೆ ಮತ ನೀಡಿ’ ಎಂದು ಕಾರ್ಯಕರ್ತರು ಹೇಳುತ್ತಿದ್ದಂತೆ ಕೋಪಗೊಂಡ ಮಹಿಳೆ, ‘ಸದಾನಂದಗೌಡ ಅವರು ಏನು ಮಾಡಿದ್ದಾರೆ. ಒಂದಾದರೂ ಕೆಲಸ ಮಾಡಿದ್ದರೆ ಹೇಳಿ. ಯಾವಾಗೋ ಬಂದು ಪೆಪ್ಸೊಡೆಂಟ್ ರೀತಿಯಲ್ಲಿಹಲ್ಲು ತೋರಿಸಿ ಹೋಗಿದ್ದಾರೆ. ಈಗ ಮತ ಕೇಳಲು ಬರುತ್ತೀರಾ’ ಎಂದು ತರಾಟೆಗೆ ತೆಗೆದುಕೊಂಡರು. ಮಹಿಳೆಗೆ ಉತ್ತರಿಸಲಾಗದೇ ಕಾರ್ಯಕರ್ತರು, ಸ್ಥಳದಿಂದ ಹೊರಟು ಹೋದರು. ಈ ದೃಶ್ಯ ವಿಡಿಯೊದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT