ADVERTISEMENT

ಬೆಂಗಳೂರು: ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ 8ನೇ ಶಾಖೆ ಆರಂಭ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 16:14 IST
Last Updated 23 ಜನವರಿ 2026, 16:14 IST
ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ 8ನೇ ಶಾಖೆಯನ್ನು ರುಕ್ಮಿಣಿ ವಸಂತ್‌, ಟಿ.ಎ. ಶರವಣ ಅವರು ಶುಕ್ರವಾರ ಉದ್ಘಾಟಿಸಿದರು
ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ 8ನೇ ಶಾಖೆಯನ್ನು ರುಕ್ಮಿಣಿ ವಸಂತ್‌, ಟಿ.ಎ. ಶರವಣ ಅವರು ಶುಕ್ರವಾರ ಉದ್ಘಾಟಿಸಿದರು   

ಬೆಂಗಳೂರು: ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನ 8ನೇ ಶಾಖೆ ಕನಕಪುರ ರಸ್ತೆಯಲ್ಲಿ ಶುಕ್ರವಾರ ಆರಂಭವಾಯಿತು.

ನಟಿ ರುಕ್ಮಿಣಿ ವಸಂತ್ ಹಾಗೂ ಬಿಗ್‌ಬಾಸ್‌–12ರ ವಿಜೇತ ಗಿಲ್ಲಿ ನಟರಾಜ್‌, ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಟಿ.ಎ. ಶರವಣ ಅವರು ಕನಕಪುರ ರಸ್ತೆಯ ರಘುವನಹಳ್ಳಿಯಲ್ಲಿ ಶಾಖೆಯನ್ನು ಉದ್ಘಾಟಿಸಿದರು.

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ‘ಸಾಯಿಬಾಬಾ ಅವರ ಭಕ್ತರಾದ ಶರವಣ ಅವರು ಸಾಯಿ ಗೋಲ್ಡ್ ಪ್ಯಾಲೇಸ್ ಸ್ಥಾಪನೆ ಮಾಡಿದ್ದಾರೆ. ಗ್ರಾಹಕರಿಗೆ ಉತ್ತಮ ಚಿನ್ನಾಭರಣ ಲಭಿಸಬೇಕು ಎಂದು ಇದೀಗ 8ನೇ ಶಾಖೆಯನ್ನು ಪ್ರಾರಂಭಿಸಿದ್ದಾರೆ. 500ಕ್ಕೂ ಹೆಚ್ಚು ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ಅವರ ಕುಟುಂಬಗಳಿಗೆ ಆಸರೆಯಾಗಿದ್ದಾರೆ’ ಎಂದರು.

ADVERTISEMENT

ಟಿ.ಎ.ಶರವಣ ಮಾತನಾಡಿ, ‘ಬೆಂಗಳೂರಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆ ಹೋಗಿ ಶಾಪಿಂಗ್‌ ಮಾಡಲು, ಸಂಚಾರ ದಟ್ಟಣೆಯಿಂದ ಒಂದು ದಿನ ವ್ಯರ್ಥವಾಗುತ್ತದೆ. ಜನರ ಅನುಕೂಲಕ್ಕಾಗಿ ಕನಕಪುರ ರಸ್ತೆಯಲ್ಲಿ ಶಾಖೆ ಆರಂಭಿಸಲಾಗಿದೆ. ಮಂಡ್ಯ, ಚನ್ನಪಟ್ಟಣ, ರಾಮನಗರದ ಜನತೆಗೂ ಇದು ಹತ್ತಿರವಾಗುತ್ತದೆ’ ಎಂದರು.

‘ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ಚಿನ್ನ ಖರೀದಿಸುವುದು ಒಳ್ಳೆಯದು. 10 ಗ್ರಾಂ ಚಿನ್ನದ ಮೇಲೆ ₹5 ಸಾವಿರ ಹಾಗೂ 1 ಕೆ.ಜಿ ಬೆಳ್ಳಿ ಖರೀದಿಗೆ ₹5 ಸಾವಿರ ರಿಯಾಯಿತಿ ನೀಡಲಾಗುತ್ತಿದೆ. ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ಮೇಕಿಂಗ್ ಚಾರ್ಜ್ ಇರುವುದಿಲ್ಲ. ಒಂದು ಕ್ಯಾರೆಟ್ ಡೈಮಂಡ್ ಖರೀದಿಗೆ ₹ 10 ಸಾವಿರ ರಿಯಾಯಿತಿ ಫೆಬ್ರುವರಿ 10ರವರೆಗೆ ಇರುತ್ತದೆ’ ಎಂದು ತಿಳಿಸಿದರು.

ಕೇಂದ್ರ ಸಚಿವೆ ಶೋಭಾ ಕರಾಂದ್ಲಾಜೆ, ಬಿಗ್‌ಬಾಸ್‌ ಸ್ಪರ್ಧಿಗಳಾದ ರಕ್ಷಿತಾ, ಅಶ್ವಿನಿ ಗೌಡ, ಕಾವ್ಯ, ರಘು, ಧನುಷ್ ಗೌಡ, ಸ್ಪಂದನ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.