ADVERTISEMENT

ಸಮಾಜಮುಖಿ: ಐವರು ಲೇಖಕರಿಗೆ ಬಹುಮಾನ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 14:37 IST
Last Updated 31 ಅಕ್ಟೋಬರ್ 2025, 14:37 IST
Venugopala K.
   Venugopala K.

ಪ್ರಜಾವಾಣಿ ವಾರ್ತೆ

ಬೆಂಗಳೂರು: ‘ಸಮಾಜಮುಖಿ ಪ್ರಕಾಶನ’ವು ಹಮ್ಮಿಕೊಂಡಿದ್ದ 2025ನೇ ಸಾಲಿನ ಯುವ ಲೇಖನ ಸ್ಪರ್ಧೆಯಲ್ಲಿ ಐದು ಲೇಖನಗಳು ಬಹುಮಾನಕ್ಕೆ ಆಯ್ಕೆಯಾಗಿವೆ. 

ಅಂಜಿನಪ್ಪ ಜಿ., ಧನ್ಯ ಎ., ಮಹಮ್ಮದ್ ಷರೀಫ್ ಕಾಡುಮಠ, ಸುನೀಲ್ ನಾಯಕ್ ಹಾಗೂ ಮಮತಾ ಅವರ ಲೇಖನಗಳು ಬಹುಮಾನಕ್ಕೆ ಆಯ್ಕೆಯಾಗಿವೆ. ಬಹುಮಾನವು ತಲಾ ₹ 5 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ‘ಕನ್ನಡಿಗರು ಉದ್ಯಮಶೀಲತೆಯಲ್ಲಿ ಏಕೆ ಹಿಂದೆ ಬಿದ್ದಿದ್ದಾರೆ...?’ ಎಂಬುದು ಸ್ಪರ್ಧೆಯ ವಿಷಯವಾಗಿತ್ತು. ಸ್ಪರ್ಧೆಯ ಅಂತಿಮ ಸುತ್ತಿಗೆ 17 ಲೇಖನಗಳು ಆಯ್ಕೆಯಾಗಿದ್ದವು. 

ADVERTISEMENT

ಮೌನ ವಿ.ಜೆ., ಸಚಿನ್ ಎಂ., ಮುಹಮ್ಮದ್ ಅಜ್ಮಲ್, ಸೀಮಾ ಪ. ಶಿರಗುಪ್ಪಿ, ಉಮ್ಮರ್ ಫಾರೂಕ್ ಎ. ಅವರ ಲೇಖನಗಳು ತೀರ್ಪುಗಾರರ ಮೆಚ್ಚುಗೆಗೆ ಭಾಜನವಾಗಿವೆ. ಕನ್ನಡ ಪರ ಚಿಂತಕ ಗಿರೀಶ್ ಕಾರ್ಗದ್ದೆ ತೀರ್ಪುಗಾರರಾಗಿದ್ದರು. 

ನ.9ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾಜಮುಖಿ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಬಹುಮಾನ ನೀಡಲಾಗುವುದು ಎಂದು ಪ್ರಕಾಶನದ ಚಂದ್ರಕಾಂತ ವಡ್ಡು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.