ADVERTISEMENT

‘ಸಂಸ್ಕೃತಿ ಸಂಗಮ’ ಪ್ರಶಸ್ತಿಗೆ ಆಯ್ಕೆ

21ರಂದು ಪ್ರಶಸ್ತಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2023, 19:52 IST
Last Updated 17 ಅಕ್ಟೋಬರ್ 2023, 19:52 IST
ಹಿ.ಚಿ.ಬೋರಲಿಂಗಯ್ಯ
ಹಿ.ಚಿ.ಬೋರಲಿಂಗಯ್ಯ   

ಬೆಂಗಳೂರು: ಡಾ.ಸಿ. ಸೋಮಶೇಖರ-ಎನ್. ಸರ್ವಮಂಗಳಾ ಸಾಹಿತ್ಯ ಸೇವಾ ಪ್ರತಿಷ್ಠಾನ ನೀಡುವ ‘ಸಂಸ್ಕೃತಿ ಸಂಗಮ–2023’ ಪ್ರಶಸ್ತಿಗೆ ಶಾಂತಾ ಇಮ್ರಾಪುರ (ವಚನ ಸಾಹಿತ್ಯ), ಹೀ.ಚಿ. ಬೋರಲಿಂಗಯ್ಯ (ಜಾನಪದ ಸಾಹಿತ್ಯ), ಎ.ವಿ. ನಾವಡ (ದಾಸ ಸಾಹಿತ್ಯ), ನರಸಿಂಹಲು ವಡವಾಟಿ (ಸಂಗೀತ ಕ್ಷೇತ್ರ) ಆಯ್ಕೆಯಾಗಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ಸಿ. ಸೋಮಶೇಖರ, ‘ಇದೇ 21ರಂದು (ಶನಿವಾರ) ನಗರದ ಗಾಂಧಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರತಿ ಪ್ರಶಸ್ತಿಯು ₹10 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಸರಸ್ವತಿ ವಿಗ್ರಹ ಒಳಗೊಂಡಿದೆ’ ಎಂದರು.

ಸಾಹಿತಿ ಹಂ.ಪ. ನಾಗರಾಜಯ್ಯ ಅವರು ‘ಸಂಸ್ಕೃತಿ ಸಂಗಮ’ ವಿಶೇಷ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನಿಧ್ಯವಹಿಸಲಿದ್ದು, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.