ADVERTISEMENT

ಸಂಕ್ರಾಂತಿ: ಎಲ್ಲೆಲ್ಲೂ ಕಬ್ಬು, ಗೆಣಸುಗಳದ್ದೇ ದರ್ಬಾರ್

​ಪ್ರಜಾವಾಣಿ ವಾರ್ತೆ
Published 13 ಜನವರಿ 2019, 20:02 IST
Last Updated 13 ಜನವರಿ 2019, 20:02 IST
ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಲ್ಲೇಶ್ವರದಲ್ಲಿ ಭಾನುವಾರ ಎಳ್ಳು, ಬೆಲ್ಲ ಮತ್ತು ಸಕ್ಕರೆ ಅಚ್ಚುಗಳ ಖರೀದಿ ನಿರತ ಜನ –ಪ್ರಜಾವಾಣಿ ಚಿತ್ರ
ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಲ್ಲೇಶ್ವರದಲ್ಲಿ ಭಾನುವಾರ ಎಳ್ಳು, ಬೆಲ್ಲ ಮತ್ತು ಸಕ್ಕರೆ ಅಚ್ಚುಗಳ ಖರೀದಿ ನಿರತ ಜನ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಸಂಕ್ರಾಂತಿ ಹಬ್ಬದ ನಿಮಿತ್ತ ನಗರದ ಎಲ್ಲ ಮಾರುಕಟ್ಟೆಗಳಲ್ಲಿ ಕಬ್ಬು, ಗೆಣಸು, ಕಡಲೆಕಾಯಿಗಳೇ ಕಂಡುಬರುತ್ತಿವೆ.

ಗಾಂಧಿ ಬಜಾರ್‌, ಕೆ.ಆರ್‌.ಮಾರುಕಟ್ಟೆ, ಮಲ್ಲೇಶ್ವರ, ಬಸವನಗುಡಿ, ಜಯನಗರ, ಯಶವಂತಪುರ, ವಿಜಯನಗರ, ದಾಸರಹಳ್ಳಿ, ಮಡಿವಾಳ, ಕೆ.ಆರ್‌.ಪುರ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಸಂಭ್ರಮ ಜೋರಾಗಿದೆ.

ಕೆ.ಆರ್‌.ಮಾರುಕಟ್ಟೆಯಲ್ಲಿ ಭಾನುವಾರ ಹಬ್ಬಕ್ಕೆ ಎರಡು ದಿನ ಮುಂಚಿತವಾಗಿರುವಾಗಲೇ ಹಸಿ ಶೇಂಗಾ ಕೆ.ಜಿಗೆ ₹80ರಂತೆ ಮಾರಾಟವಾಗುತ್ತಿತ್ತು. ಅಲ್ಲದೇ, ಜೋಡಿ ಕಬ್ಬುಗಳು ₹70 ರಿಂದ ₹80ಕ್ಕೆ ಮಾರಾಟವಾಗುತ್ತಿದ್ದವು.ಸುಲಗಾಯಿ (ಕಡಲೆ ಗಿಡ) ಕೆ.ಜಿ.ಗೆ ₹100 ಇದೆ.

ADVERTISEMENT

ಕ್ಯಾರೆಟ್‌ ದರ ಕುಸಿತ ಕಂಡಿದ್ದು, ₹10ಕ್ಕೆ ಮಾರಾಟವಾಗುತ್ತಿತ್ತು. ಕರಬೂಜ, ಚಕ್ಕೋತ ಹಣ್ಣುಗಳ ದರ ಇಳಿಕೆ ಕಂಡಿವೆ. ದುಂಡುಮಲ್ಲಿಗೆ ಹೂವಿನ ದರ ಏರಿಕೆ ಕಂಡಿದ್ದು, ಮಾರಿಗೆ ₹150 ಇದೆ.

ಪ್ರತಿವರ್ಷದಂತೆ ಈ ಬಾರಿಯೂಹಾಪ್‌ಕಾಮ್ಸ್‌ ವತಿಯಿಂದ ಲಾಲ್‌ಬಾಗ್‌ ಮತ್ತು ಕಬ್ಬನ್‌ಪಾರ್ಕ್‌ಗಳಲ್ಲಿ ಸೋಮವಾರದವರೆಗೂ (ಜ.14)ಕಬ್ಬು, ಗೆಣಸು, ಕಡ್ಲೆಕಾಯಿ, ಅವರೆಕಾಯಿ, ಎಳ್ಳು-ಬೆಲ್ಲ ಸೇರಿದಂತೆ ತರಕಾರಿ ಮೇಳ ಆಯೋಜಿಸಲಾಗಿದೆ.

ಲಾಲ್‌ಬಾಗ್‌ನಲ್ಲಿ 15 ಹಾಗೂ ಕಬ್ಬನ್‌ಪಾರ್ಕ್‌ನಲ್ಲಿ 3 ಮಳಿಗೆಗಳನ್ನು ತೆರೆಯಲಾಗಿದೆ.ಬೆಳಿಗ್ಗೆ 7.30 ರಿಂದ ರಾತ್ರಿ 8.30ರ ತನಕ ಮಳಿಗೆಗಳು ತೆರೆದಿರುತ್ತವೆ. ಗುಣಮಟ್ಟದ ಹಾಗೂ ತಾಜಾ ಪದಾರ್ಥಗಳನ್ನು ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ‌.

**

ಹಾಪ್‌ಕಾಮ್ಸ್‌– ಸಂಕ್ರಾಂತಿ ಸಂತೆ ದರ (ಪ್ರತಿ ಕೆ.ಜಿ.ಗೆ ₹ ಗಳಲ್ಲಿ )

ಗೆಣಸು -36

ಕಡ್ಲೆಕಾಯಿ-80

ಅವರೆಕಾಯಿ - 50

ಸಿದ್ಧ ಎಳ್ಳು-ಬೆಲ್ಲ - 200

ಕಪ್ಪುಕಬ್ಬು (ಒಂದು ಜಲ್ಲೆಗೆ) -35

**
ಕೆ.ಆರ್‌.ಮಾರುಕಟ್ಟೆ ದರ: ತರಕಾರಿ(ಕೆ.ಜಿಗೆ ₹ಗಳಲ್ಲಿ)

ಅವರೆಕಾಯಿ - 40

ಬೆಂಡೆಕಾಯಿ - 30

ಮೂಲಂಗಿ - 30

ಈರುಳ್ಳಿ - 20

ಟೊಮೆಟೊ - 50

ಕುಂಬಳಕಾಯಿ - 50

ವೀಳ್ಯದೆಲೆ -50ಕ್ಕೆ 100

**


ಹಣ್ಣುಗಳು (ಕೆ.ಜಿ.ಗೆ ₹ಗಳಲ್ಲಿ)

ನಿಂಬೆ - 100

ಸೇಬು - 80

ಕಿತ್ತಳೆ - 30

ಚಿಕ್ಕು - 20

ಏಲಕ್ಕಿ ಬಾಳೆ - 50

ಪಚ್ಚಬಾಳೆ - 30

**
ಹೂ(₹ಗಳಲ್ಲಿ)

ದುಂಡು ಮಲ್ಲಿಗೆ - 150

ಸೇವಂತಿಗೆ - 70

ಹಾರ - 60

ಕನಕಾಂಬರ - 120

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.