ADVERTISEMENT

ಸಾವನದುರ್ಗದ ಪ್ರವಾಸ: ದಿಕ್ಕು ತಪ್ಪಿ 3 ದಿನ ಸಿಲುಕಿದ್ದ ವಿದ್ಯಾರ್ಥಿ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 18:37 IST
Last Updated 8 ನವೆಂಬರ್ 2021, 18:37 IST
ಕೃತಿಕ್‌
ಕೃತಿಕ್‌   

ಮಾಗಡಿ: ಸಾವನದುರ್ಗದ ಪ್ರವಾಸಕ್ಕೆ ಬಂದು ಬೆಟ್ಟ ಹತ್ತಿ ಇಳಿಯುವಾಗ ದಾರಿತಪ್ಪಿ ಬಿರುಕಿನಲ್ಲಿ ಮೂರು ದಿನ ಸಿಲುಕಿದ್ದ ವಿದ್ಯಾರ್ಥಿಯನ್ನು ಪೊಲೀಸರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸೋಮವಾರ ರಕ್ಷಿಸಿದ್ದಾರೆ.

ಬೆಂಗಳೂರಿನ ನಾರಾಯಣ ಕಾಲೇಜಿನ ವಿದ್ಯಾರ್ಥಿಕೃತಿಕ್‌ ಎಂಬಾತನನ್ನು ರಕ್ಷಿಸಲಾಗಿದೆ. ಶುಕ್ರವಾರ ಸಾವನದುರ್ಗಕ್ಕೆ ಪ್ರವಾಸ ಬಂದಿದ್ದ ಆತ ಬೆಟ್ಟ ಹತ್ತಿ ಎರಡನೇ ಸುತ್ತಿನ ಕೋಟೆಯಲ್ಲಿ ಕೆಳಗೆ ಇಳಿಯುವ ವೇಳೆ ದಾರಿ ತಪ್ಪಿದ್ದರು. ಬಂಡೆಗಳ ಬಿರುಕಿನಲ್ಲಿ ಜಾರಿ ಮೂರು ದಿನ ಕಳೆದಿದ್ದರು.

ವಿದ್ಯಾರ್ಥಿಯ ತಂದೆ ಡಿ.ಆರ್‌.ಡಿ.ಒದಲ್ಲಿ ವಿಜ್ಞಾನಿಯಾಗಿದ್ದಾರೆ. ಅರಣ್ಯ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಯನ್ನು ರಕ್ಷಿಸಿ ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.