ADVERTISEMENT

ಶಾಲಾ ಶುಲ್ಕ ಕಡಿತಕ್ಕೆ ಒತ್ತಾಯ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 20:19 IST
Last Updated 29 ಜುಲೈ 2020, 20:19 IST
ಶಾಲೆಯ ಆವರಣದಲ್ಲಿ ಸೇರಿರುವ ಪೋಷಕರು
ಶಾಲೆಯ ಆವರಣದಲ್ಲಿ ಸೇರಿರುವ ಪೋಷಕರು   

ಕೆಂಗೇರಿ: ಶಾಲಾ ವಾರ್ಷಿಕ ಶುಲ್ಕವನ್ನು ಕಡಿತಗೊಳಿಸಬೇಕು ಹಾಗೂ ಶುಲ್ಕ ಪಾವತಿಗೆ ಸಮಯಾವಕಾಶ ನೀಡಬೇಕು ಎಂದು ಒತ್ತಾಯಿಸಿ ಪೋಷಕರು ಸ್ವರ್ಗರಾಣಿ ಶಾಲೆಯ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಪೂರ್ತಿ ಶುಲ್ಕವನ್ನು ಕೂಡಲೇ ಪಾವತಿಸಬೇಕು ಎಂದು ಸೂಚಿಸಿ ರಾಜರಾಜೇಶ್ವರಿನಗರದ ಸ್ವರ್ಗರಾಣಿ ಶಾಲೆಯ ಆಡಳಿತ ಮಂಡಳಿಯವರು ಪೋಷಕರಿಗೆ ಸಂದೇಶ ಕಳುಹಿಸಿದ್ದರು. ಇದರಿಂದ ಆತಂಕಗೊಂಡ 200ಕ್ಕೂ ಹೆಚ್ಚು ಪೋಷಕರು ಶಾಲೆಗೆ ಬಂದು ‘ಕೂಡಲೇ ಶುಲ್ಕ ಪಾವತಿ ಮಾಡಲು ಸಾಧ್ಯವಿಲ್ಲ. ಶುಲ್ಕವನ್ನು ಶೇ 50ರಷ್ಟು ಕಡಿತಗೊಳಿಸಿ’ ಎಂದು ಒತ್ತಾಯಿಸಿದರು.

ಬಳಿಕ ಆಡಳಿತ ಮಂಡಳಿಯವರು ಪೋಷಕರ ಮನವಿ ಸ್ವೀಕರಿಸಿದರು. ಸ್ಥಳೀಯ ಮುಖಂಡ ಜಿ.ಎಚ್‌.ರಾಮ
ಚಂದ್ರ ಅವರು ಶಾಲಾ ಮುಖ್ಯಸ್ಥರು ಹಾಗೂ ಪೋಷಕರೊಂದಿಗೆ ಮಾತುಕತೆ ನಡೆಸಿದರು.

ADVERTISEMENT

‘ಅನೇಕ ಮಂದಿಗೆ ಕೆಲಸ ಇಲ್ಲ. ಇಂತಹ ಸಂದರ್ಭದಲ್ಲಿ ನಾವು ಶುಲ್ಕ ಪಾವತಿ ಮಾಡುವುದಾದರೂ ಹೇಗೆ’ ಎಂದು ಪೋಷಕರೊಬ್ಬರು ಪ್ರಶ್ನಿಸಿದರು.ಆಡಳಿತ ಮಂಡಳಿಯವರು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.