ADVERTISEMENT

ಬೆಂಗಳೂರು ಚಿತ್ರಗಳು: ಒಂದು ಕಡೆ ಶಾಲೆ ತೆರೆಯಲು ಸಿದ್ಧತೆ, ಮತ್ತೊಂದು ಕಡೆ ನಿಷೇಧಾಜ್ಞೆ

ಶುಕ್ರವಾರದಿಂದ ಶಾಲಾ–ಕಾಲೇಜುಗಳು ಪುನಾರಂಭಗೊಳ್ಳುತ್ತಿರುವುದರಿಂದ ಚಾಮರಾಜಪೇಟೆಯ ವಿಶ್ವೇಶ್ವರಯ್ಯ ಬಿಬಿಎಂಪಿ ಪಬ್ಲಿಕ್‌ ಶಾಲೆ ಮತ್ತು ಕಾಲೇಜನ್ನು ಶಿಕ್ಷಕ ಸಿಬ್ಬಂದಿ ಸಿಂಗಾರಗೊಳಿಸುತ್ತಿದ್ದ ದೃಶ್ಯ ಗುರುವಾರ ಕಂಡು ಬಂತು. ಮತ್ತೊಂದು ಕಡೆ, ಕೊರೊನಾ ರೂಪಾಂತರಿ ಸೋಂಕು ಹರಡುವಿಕೆ ತಡೆಗಾಗಿ ಹೊಸ ವರ್ಷದ ಮುನ್ನಾದಿನವಾದ ಗುರುವಾರ ಮಧ್ಯಾಹ್ನದಿಂದಲೇ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಟೆಂಟ್‌ಗಳನ್ನು ನಿರ್ಮಿಸಿಕೊಂಡು ನಾಕಾಬಂದಿ ಬಿಗಿಗೊಳಿಸಿದ್ದಾರೆ. –ಪ್ರಜಾವಾಣಿ ಚಿತ್ರ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 12:46 IST
Last Updated 31 ಡಿಸೆಂಬರ್ 2020, 12:46 IST
ಸ್ವಚ್ಛಗೊಂಡು ಸಿಂಗಾರಗೊಳ್ಳುತ್ತಿವೆ ಶಾಲೆಗಳು
ಸ್ವಚ್ಛಗೊಂಡು ಸಿಂಗಾರಗೊಳ್ಳುತ್ತಿವೆ ಶಾಲೆಗಳು   
ಶುಕ್ರವಾರದಿಂದ ಶಾಲಾ–ಕಾಲೇಜುಗಳು ಪುನಾರಂಭಗೊಳ್ಳುತ್ತಿರುವುದರಿಂದ ಚಾಮರಾಜಪೇಟೆಯ ವಿಶ್ವೇಶ್ವರಯ್ಯ ಬಿಬಿಎಂಪಿ ಪಬ್ಲಿಕ್‌ ಶಾಲೆ ಮತ್ತು ಕಾಲೇಜನ್ನು ಶಿಕ್ಷಕ ಸಿಬ್ಬಂದಿ ಸಿಂಗಾರಗೊಳಿಸಿದರು
ಶಾಲೆ–ಕಾಲೇಜು ಮುಂಭಾಗ ರಂಗೋಲಿ, ತೋರಣದ ಸಿಂಗಾರ
ಗುರುವಾರ ಮಧ್ಯಾಹ್ನದಿಂದಲೇ ನಗರದಲ್ಲಿ ನಿಷೇಧಾಜ್ಞೆ
ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಟೆಂಟ್‌ಗಳನ್ನು ನಿರ್ಮಿಸಿಕೊಂಡು ನಾಕಾಬಂದಿ ಬಿಗಿ
ಹೊಸವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿರುವುದರಿಂದ ಶ್ರೀನಗರದ ಕಾಳಿದಾಸ ಬಡಾವಣೆಯ ಬೇಕರಿಯೊಂದರಲ್ಲಿ ಕೇಕ್‌ ಖರೀದಿಸಲು ಜನ ಮುಗಿಬಿದ್ದರು –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.