ADVERTISEMENT

ಕೋವಿಡ್‌: ಶಿಲ್ಪ ಕಲಾವಿದೆ ಕನಕಾ ಮೂರ್ತಿ ನಿಧನ

​ಪ್ರಜಾವಾಣಿ ವಾರ್ತೆ
Published 13 ಮೇ 2021, 18:39 IST
Last Updated 13 ಮೇ 2021, 18:39 IST
ಕನಕಾ ಮೂರ್ತಿ
ಕನಕಾ ಮೂರ್ತಿ    

ಬೆಂಗಳೂರು: ನಾಡಿನ ಖ್ಯಾತ ಶಿಲ್ಪ ಕಲಾವಿದರಲ್ಲಿ ಒಬ್ಬರಾದ ಕನಕಾ ಮೂರ್ತಿ (79) ಗುರುವಾರ ಬೆಳಿಗ್ಗೆ ನಿಧನರಾದರು. ಕೋವಿಡ್‌ ದೃಢಪಟ್ಟಿದ್ದು, ಕಳೆದ ಬುಧವಾರ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅವರಿಗೆ ಪತಿ, ಪುತ್ರಿ ಇದ್ದಾರೆ. ಗುರುವಾರ ಅಂತ್ಯಕ್ರಿಯೆ ನಡೆಯಿತು.

1942ರಲ್ಲಿ ಗದಗದಲ್ಲಿ ಜನಿಸಿದ್ದ ಅವರು, ಶಿಲ್ಪಿ ವಾದಿರಾಜ್ ಅವರ ಬಳಿ ಶಿಲ್ಪ ಕಲಾ ಅಭ್ಯಾಸ ಮಾಡಿದ್ದರು. ಬೆಂಗಳೂರಿನ ಲಾಲ್‌ಬಾಗ್ ನಲ್ಲಿರುವ ಕುವೆಂಪು ಕಂಚಿನ ಪ್ರತಿಮೆ, ಸತ್ಯಸಾಯಿ ಅಸ್ಪತ್ರೆಯಲ್ಲಿನ ನಾಲ್ಕು ಅಡಿ ಎತ್ತರದ ಹೊಯ್ಸಳ ಶೈಲಿಯ ವಿಷ್ಣು ಪ್ರತಿಮೆ ಮತ್ತು ಮೈಸೂರಿನಎಂಜಿನಿಯರುಗಳ ಸಂ‌ಸ್ಥೆಯಲ್ಲಿರುವ ಸರ್.ಎಂ. ವಿಶ್ವೇಶ್ವರಯ್ಯ ಅವರ ಕಂಚಿನ ಪ್ರತಿಮೆಯನ್ನು ನಿರ್ಮಿಸಿದ್ದಾರೆ.

ದೇಶದ ವಿವಿಧ ದೇವಾಲಯಗಳಲ್ಲಿ ಇವರು ತಯಾರಿಸಿದ 200ಕ್ಕೂ ಅಧಿಕ ಶಿಲ್ಪಗಳಿವೆ. ಕಲ್ಲು, ಮರ ಮತ್ತು ಫೈಬರ್‌ನಲ್ಲಿ ಕಲಾಕೃತಿಗಳನ್ನು ತಯಾರಿಸಿದ ಅವರು, ಸಾಹಿತ್ಯ ಕೃತಿಗಳನ್ನು ಕೂಡ ರಚಿಸಿದ್ದಾರೆ. ರಾಜ್ಯೋತ್ಸವ, ಜಕಣಾಚಾರಿ ಪ್ರಶಸ್ತಿ ಸೇರಿ ಹಲವು
ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.