ADVERTISEMENT

ಶೀಘ್ರವೇ ಸೆಮಿಕಂಡಕ್ಟರ್‌ ಸಂಶೋಧನಾ ಕೇಂದ್ರ ಆರಂಭ: ರಾಜೀವ್‌ ಚಂದ್ರಶೇಖರ್‌

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 22:00 IST
Last Updated 24 ಫೆಬ್ರುವರಿ 2023, 22:00 IST
ಐಐಎಸ್‌ಸಿಯಲ್ಲಿ ನಡೆದ 2ನೇ ಸೆಮಿಕಾನ್ ಇಂಡಿಯಾ ಫ್ಯೂಚರ್ ಡಿಸೈನ್ ರೋಡ್‌ಶೋದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಾತನಾಡಿದರು
ಐಐಎಸ್‌ಸಿಯಲ್ಲಿ ನಡೆದ 2ನೇ ಸೆಮಿಕಾನ್ ಇಂಡಿಯಾ ಫ್ಯೂಚರ್ ಡಿಸೈನ್ ರೋಡ್‌ಶೋದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಾತನಾಡಿದರು   

ಬೆಂಗಳೂರು: ಐಐಎಸ್‌ಸಿಯಲ್ಲಿ ನಡೆದ 2ನೇ ಸೆಮಿಕಾನ್ ಇಂಡಿಯಾ ಫ್ಯೂಚರ್ ಡಿಸೈನ್ ರೋಡ್‌ಶೋಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಚಾಲನೆ ನೀಡಿದರು.

ಭಾರತವು ಡಿಜಿಟಲೀಕರಣ ಕ್ಷೇತ್ರದಲ್ಲಿ ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿದೆ. ಭಾರತವು ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಹೊಸ ಅವಕಾಶ ಸೃಜಿಸುತ್ತಿದೆ ಎಂದು ಅವರು ಹೇಳಿದರು.

ವಿಶ್ವಕ್ಕೆ ಅತ್ಯುತ್ತಮ ಪ್ರತಿಭೆ, ಜಾಗತಿಕ ಉತ್ಪನ್ನ, ಡಿಜಿಟಲ್ ಉತ್ಪನ್ನ ಮತ್ತು ಉತ್ತಮ ಸೇವೆಗಳನ್ನು ತಲುಪಿಸುವ ನಿಟ್ಟಿನಲ್ಲಿ ನವ ಭಾರತವು ವಿಶ್ವಾಸಾರ್ಹ ಪಾಲುದಾರನಾಗಿ ಹೊರಹೊಮ್ಮಿದೆ ಎಂದು ಬಣ್ಣಿಸಿದರು.

ADVERTISEMENT

ಭಾರತದ ಯುವ ಜನರಿಗೆ ವಿಪುಲವಾದ ಅವಕಾಶ ಒದಗಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.