ADVERTISEMENT

ನೆಲಮಂಗಲ ನಗರ ಸಭೆ: ವಿಪ್‌ ಉಲ್ಲಂಘಿಸಿದ 7 ಸದಸ್ಯರು ಅನರ್ಹ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 16:18 IST
Last Updated 24 ಫೆಬ್ರುವರಿ 2026, 16:18 IST
   

ನೆಲಮಂಗಲ: ನಗರ ಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ವಿಪ್‌ ಉಲ್ಲಂಘಿಸಿ ಮತ ಚಲಾಯಿಸಿದ ಏಳು ಸದಸ್ಯರನ್ನು ಜಿಲ್ಲಾ ಚುನಾವಣಾಧಿಕಾರಿ ಎ.ಬಿ. ಬಸವರಾಜು ಅವರು ಫೆ.24ರಂದು ಅನರ್ಹಗೊಳಿಸಿದ್ದಾರೆ.

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗೆ 2025ರ ಫೆಬ್ರುವರಿ 13ರಂದು ನಡೆದ ಚುನಾವಣೆಯಲ್ಲಿ, ಜೆಡಿಎಸ್‌ ಚಿಹ್ನೆ ಅಡಿ ಸದಸ್ಯರಾಗಿ ಆಯ್ಕೆಯಾಗಿದ್ದ ಸದಸ್ಯರು ಪಕ್ಷವು ಜಾರಿಗೊಳಿಸಿದ್ದ ವಿಪ್‌ ಉಲ್ಲಂಘಿಸಿದ್ದರು. ಜೆಡಿಎಸ್‌ ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸದೆ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತ ಚಲಾಯಿಸಿ ಚುನಾವಣಾ ಅಕ್ರಮ ಎಸಗಿರುತ್ತಾರೆ ಎಂದು ಆರೋಪಿಸಿ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಮುನೇಗೌಡ ಅವರು 2025ರ ಮಾರ್ಚ್‌ 3ರಂದು ಪಕ್ಷಾಂತರ ನಿಷೇಧ ಕಾಯ್ದೆಯ ಸೆಕ್ಷನ್‌ 3 ಮತ್ತು 4ರ ಅಡಿ ಪೌರಾಯುಕ್ತರಿಗೆ ದೂರು ಸಲ್ಲಿಸಿದ್ದರು.

ಪೌರಾಯುಕ್ತರಿಂದ ಅರ್ಜಿ ಸ್ವೀಕರಿಸಿದ ಜಿಲ್ಲಾಧಿಕಾರಿಯವರ ನ್ಯಾಯಾಲಯ, ವಾದಿ ಪ್ರತಿವಾದಿಗಳಿಗೆ ವಾದ ಮಂಡಿಸಲು ಅವಕಾಶ ನೀಡಿತ್ತು. ಕರ್ನಾಟಕ ಸ್ಥಳೀಯ ಸಂಸ್ಥೆಗಳ (ಪಕ್ಷಾಂತರ ನಿಷೇಧ) ಕಾಯ್ದೆಯ 1987 ಸೆಕ್ಷನ್‌ 4(2)(III) ರನ್ವಯ ಸದಸ್ಯರನ್ನು ಅನರ್ಹಗೊಳಿಸಿ ಆದೇಶಿಸಿದರು.

ADVERTISEMENT

ಅನರ್ಹರಾದವರು: ಜಿ.ಆನಂದ್– ಪ್ರಸ್ತುತ ಉಪಾಧ್ಯಕ್ಷ, ಶಾರದಾ ಉಮೇಶ್, ದಾಕ್ಷಾಯಣಿ ರವಿಕುಮಾರ್, ಬಿ.ಪದ್ಮನಾಭ ಸ್ಥಾಯಿ ಸಮಿತಿ ಅಧ್ಯಕ್ಷ, ಭಾರತಿಬಾಯಿ, ನರಸಿಂಹಮೂರ್ತಿ, ಲತಾ ಹೆಮಂತಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.