ADVERTISEMENT

ಹಿರಿಯ ಸಾಹಿತಿ ಶೇಷನಾರಾಯಣ ನಿಧನ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 18:53 IST
Last Updated 7 ಆಗಸ್ಟ್ 2019, 18:53 IST
ಶೇಷನಾರಾಯಣ
ಶೇಷನಾರಾಯಣ   

ಬೆಂಗಳೂರು: ಹಿರಿಯ ಸಾಹಿತಿ, ಕಾದಂಬರಿ ಕಾರ ಶೇಷನಾರಾಯಣ (92) ಬುಧವಾರ ನಗರದ ಎಂ.ಎಸ್‌.ಪಾಳ್ಯದ ನಿವಾಸದಲ್ಲಿ ನಿಧನರಾದರು. ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

ಕರ್ನಾಟಕ– ತಮಿಳುನಾಡು ರಾಜ್ಯಗಳ ನೀರಿನ ಸಮಸ್ಯೆಯ ಕುರಿತು ಬರೆದ ಸಂಶೋಧನಾತ್ಮಕ ಕೃತಿಗಳಾದ ‘ಕಾವೇರಿ ಒಂದು ಚಿಮ್ಮು, ಒಂದು ಹೊರಳು’ ಮತ್ತು ‘ನಮ್ಮ ನದಿಗಳು ಮತ್ತು ಸಮಸ್ಯೆಗಳು’ ಅವರಿಗೆ ಹೆಸರು ತಂದುಕೊಟ್ಟವು. ‘ಸೀಳುನಾಯಿ’, ‘ಮೊಲ್ಲೆ ಮಲ್ಲಿಗೆ’ ಸಹಿತ 6 ಕಥಾಸಂಕಲನಗಳು, ‘ಮೂಲಾನಕ್ಷತ್ರ’, ‘ಕಪಿಲೆ’, ‘ಎರಡು ಉಂಗುರ’ ಸಹಿತ 20 ಕಾದಂಬರಿ ಸೇರಿದಂತೆ 40ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ.

ತಮಿಳುನಾಡಿನ ಕೊಯಮತ್ತೂರಿ ನಲ್ಲಿ ಹುಟ್ಟಿದ್ದ ಅವರು 4ನೇ ತರಗತಿವರೆಗೆ ಓದಿದ್ದರು. ಬಡತನ ಅವರನ್ನು ಸಣ್ಣ ಪ್ರಾಯದಲ್ಲೇ ಕೆಲಸಕ್ಕೆ ದೂಡಿತ್ತು. ಗಾರೆ ಕೆಲಸ, ಲಾರಿಗಳಿಗೆ ಸರಕು ತುಂಬುವ ಕೂಲಿಯಾಗಿಯೂ ಕೆಲಸ ಮಾಡಿದ್ದರು. 1971ರಲ್ಲಿ ಬೆಂಗಳೂರಿಗೆ ಬಂದು ಪ್ರಿಂಟಿಂಗ್‌ ಪ್ರೆಸ್‌ ತೆರೆದರು. ಬಳಿಕ ಕನ್ನಡ ಸಾಹಿತ್ಯ ಪರಿಷತ್‌ನ ಅಚ್ಚುಕೂಟದ ಮೇಲ್ವಿಚಾರಕರಾದರು. ಅವರ ಒಳತುಡಿತದ ಭಾಷೆಯಾದ ಬರವಣಿಗೆ ಬಳಿಕ ಕೈಹಿಡಿಯಿತು.

ADVERTISEMENT

ಕರ್ನಾಟಕಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತಮಿಳುನಾಡು ಸರ್ಕಾರದ ಕುರಳ್‌ಪೀಠ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.