
ಪೀಣ್ಯ ದಾಸರಹಳ್ಳಿ: ‘ನಗರ ಪಾಲಿಕೆ ಚುನಾವಣೆಯಲ್ಲೂ ಪಕ್ಷ ಬಲವರ್ತನೆಗೆ ಹೆಚ್ಚು ಕಾರ್ಯ ಪ್ರವೃತ್ತರಾಗಬೇಕು’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಎಸ್. ಮುನಿರಾಜು ಅವರೊಂದಿಗೆ ಬಿಜೆಪಿ ಕಾರ್ಯಕರ್ತರ ಮನೆಮನೆಗೆ ಭೇಟಿ ನೀಡಿ ಮಾತನಾಡಿದರು.
‘ಲೋಕಸಭೆ ಚುನಾವಣೆಯಲ್ಲಿ ನನಗೆ ಹೆಚ್ಚು ಮತ ಕೊಟ್ಟಿದ್ದೀರಿ. ಹಾಗೆಯೇ ನಗರ ಪಾಲಿಕೆ ಚುನಾವಣೆಯಲ್ಲೂ ಎಲ್ಲರೂ ಕೆಲಸ ನಿರ್ವಹಿಸಿ ಹೆಚ್ಚು ಮತಗಳನ್ನು ನೀಡಿ ಪಕ್ಷ ಗೆಲ್ಲುವಂತೆ ಮಾಡಬೇಕು’ ಎಂದರು.
ಶಾಸಕ ಎಸ್. ಮುನಿರಾಜು ಮಾತನಾಡಿ, ‘ನಮ್ಮ ಕ್ಷೇತ್ರದಲ್ಲಿ ಈ ಹಿಂದೆ 8 ವಾರ್ಡ್‌ಗಳಲ್ಲಿ ಐದು ವಾರ್ಡ್‌ನಲ್ಲಿ ಬಿಜೆಪಿ ಗೆದ್ದಿತ್ತು. ಈಗ ಪ್ರತಿ ವಾರ್ಡ್‌ನಲ್ಲೂ ಬಿಜೆಪಿ ಗೆಲುವಿಗೆ ಎಲ್ಲರೂ ಶ್ರಮಿಸಬೇಕು’ಎಂದು ಮನವಿ ಮಾಡಿದರು.
ಬಿಜೆಪಿ ಕಾರ್ಯಕರ್ತರಾದ ಚಿಕ್ಕಬಾಣಾವರದ ಶಾಂತಿನಗರ ಸುರೇಶ್ ಖಾಡೆ, ಸೌಂದರ್ಯ ಬಡಾವಣೆಯ ಶಂಕರಪ್ಪ ಎಬಿಬಿ, ಸಿಡೇದಹಳ್ಳಿಯ ಪಿ.ಎಚ್.ರಾಜು, ಎಂಇಐ ಬಡಾವಣೆಯ ನಾಯ್ಡು, ಬಾಗಲಗುಂಟೆ ಮಾರಮ್ಮ ದೇವಸ್ಥಾನ ಹತ್ತಿರದ ಮಹೇಶ್, ಹಾವನೂರು ಬಡಾವಣೆಯ ಹನುಮಂತರಾಯಪ್ಪ, ಭುವನೇಶ್ವರಿನಗರದ ವೆಂಕಟೇಶಯ್ಯ, ಮಲ್ಲಸಂದ್ರದ ಗಂಗರಾಜು, ಬಿಎಚ್‌ಇಎಲ್ ಮಿನಿ ಕಾಲೊನಿಯ ಹುಚ್ಚರಂಗಯ್ಯ, ದಾಸರಹಳ್ಳಿಯ ಚಂದ್ರಣ್ಣ (ಮರಿಯಪ್ಪ), ಮತ್ತು ಡಿ.ಎಂ.ವೆಂಕಟೇಶ್ ಅವರ ಮನೆಗೆ ಕೇಂದ್ರ ಸಚಿವರು, ಶಾಸಕರು ಭೇಟಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.